Harsha Murder Case: 6 ಮಂದಿ ಹಂತಕರ ಸೆರೆ, 12 ಜನ ವಶ, ಬಂಧಿತರೆಲ್ಲರೂ ಶಿವಮೊಗ್ಗದವರು: ಎಸ್‌ಪಿ

Feb 23, 2022, 10:16 AM IST

ಶಿವಮೊಗ್ಗ (ಫೆ. 23): ಹರ್ಷ ಹತ್ಯೆ (Harsha) ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರೂ ಶಿವಮೊಗ್ಗದವರೇ ಆಗಿದ್ದು, ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಇದೇ ವೇಳೆ 12 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Shivamogga: ಶಾಂತ ಸ್ಥಿತಿಯತ್ತ ಶಿವಮೊಗ್ಗ, 25 ರವರೆಗೂ ಕರ್ಫ್ಯೂ ವಿಸ್ತರಣೆ

ಹರ್ಷ ಹತ್ಯೆ ಖಂಡಿಸಿ ರಾಜ್ಯದ ಹಲವೆಡೆ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ಹರ್ಷ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿವೆ.