ಗೃಹಲಕ್ಷ್ಮೀ ಯೋಜನೆ ಅರ್ಜಿಗೆ ಹಣ ವಸೂಲಿ: ತಹಶೀಲ್ದಾರ್‌ ದಾಳಿ

Jul 29, 2023, 9:03 PM IST

ಬೆಳಗಾವಿ (ಜು.29): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಹಣ ಪಡೆಯುತ್ತಿದ್ದ ಗ್ರಾಮ ಒನ್ ಕೇಂದ್ರವನ್ನು ಶನಿವಾರ ಅಧಿಕಾರಿಗಳು ಸೀಜ್ ಮಾಡಿದರು. ಅಥಣಿ ತಾಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಹಣ ಪಡೆದು ಗೃಹಲಕ್ಷ್ಮೀ ಅರ್ಜಿ ಹಾಕಲಾಗುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆ ಶನಿವಾರ ತಾಲೂಕು ತಹಸೀಲ್ದಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಗ್ರಾಮ ಒನ್ ಕೇಂದ್ರ ಸೀಜ್ ಮಾಡಿದರು. ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ನೋಂದಣಿಗೆ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಅಥಣಿ ತಾಲ್ಲೂಕಿನ ಅವರಖೋಡ ಗ್ರಾಮದ ಗ್ರಾಮ‌ ಒನ್ ಕೇಂದ್ರವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.