May 18, 2020, 7:04 PM IST
ಬೆಂಗಳೂರು(ಮೇ.18): ಕೊರೋನಾ ವಾರಿಯರ್ಸ್‌ಗಳು ಒಂದು ತಿಂಗಳು ಮೂರು ಸಾವಿರ ರುಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ 227 ಕೋಟಿ ರುಪಾಯಿ ಖರ್ಚಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ಸಹಾ, ಕೊರೋನಾ ವಾರಿಯರ್ಸ್‌ಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿರುವುದಾಗಿ ಡಾ. ಸುಧಾಕರ್ ತಿಳಿಸಿದ್ದಾರೆ.
ಲಾಕ್‌ಡೌನ್ ಬಹುತೇಕ ಸಡಿಲ; ಭಾನುವಾರ ಎಲ್ಲವೂ ಬಂದ್..!
ವೈದ್ಯಕೀಯ ಇಲಾಖೆಯ ಭೋದಕ ಸಿಬ್ಬಂದಿ, ಹೌಸ್ ಸರ್ಜನ್ ಮುಂತಾದ ಕೊರೋನಾ ವಾರಿಯರ್ಸ್ ಬೆನ್ನಿಗೆ ಕರ್ನಾಟಕ ರಾಜ್ಯ ಸರ್ಕಾರ ನಿಂತಿದೆ. ಇನ್ನು ಪಿಜಿ ಸ್ಟುಡೆಂಟ್ಸ್, ಸೀನಿಯರ್ ರೆಸಿಡೆಂಟ್ ವಿದ್ಯಾರ್ಥಿಗಳ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ