ದ್ವಿತೀಯ PUC ಇಂಗ್ಲೀಷ್ ಪರೀಕ್ಷೆ ಬಗ್ಗೆ ಮಹತ್ವದ ನಿರ್ಧಾರ ಪ್ರಕಟ

May 16, 2020, 3:15 PM IST

ಬೆಂಗಳೂರು(ಮೇ.16): ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದ್ದು, ಇಂಗ್ಲೀಷ್ ಬರೆಯಲು ಸಜ್ಜಾಗಬೇಕಿದೆ. ಲಾಕ್‌ಡೌನ್ ದಿಢೀರ್ ಘೋಷಣೆಯಿಂದಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಬರೆಯಬೇಕಿದ್ದ ಇಂಗ್ಲೀಷ್ ಪರೀಕ್ಷೆ ಮುಂದೂಡಲ್ಪಟ್ಟಿತ್ತು.

ಈಗಾಗಲೇ ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದೀಗ ಕೆಲವರು ಅಲ್ಲಲ್ಲೇ ಲಾಕ್‌ ಆಗಿದ್ದು, ಇನ್ನೂ ಇಂಗ್ಲೀಷ್ ಪರೀಕ್ಷೆ ಮುಗಿದಿಲ್ಲ ಎನ್ನುವ ಟೆನ್ಷನ್‌ನಲ್ಲಿದ್ದಾರೆ. ಹೀಗಾಗಿ ಅವರ ಗೊಂದಲಕ್ಕೆ ತೆರೆ ಎಳೆಯುವ ಕೆಲಸಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿ ಮುಂದಾಗಿದೆ.

ಶಾಲೆ ಪುನರಾರಂಭ: ಸಚಿವ ಸುರೇಶ್ ಕುಮಾರ್ ಹೇಳಿದ್ದಿಷ್ಟು

ಹೌದು, ಇದೀಗ ವಿದ್ಯಾರ್ಥಿಗಳು ಇರುವ ಜಿಲ್ಲಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಇದು ಹೇಗೆ? ವಿದ್ಯಾರ್ಥಿಗಳೇನು ಮಾಡಬೇಕು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.