4 ವರ್ಷಗಳಿಂದ ಸಂಬಳ ನೀಡದ BSNL, ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

Oct 26, 2021, 10:41 AM IST

ಬೆಂಗಳೂರು (ಅ. 26): ನಾಲ್ಕು ವರ್ಷದಿಂದ ಸಂಬಳ ನೀಡಿಲ್ಲ. ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದ್ದು ತಕ್ಷಣ ಸಂಬಳ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಭಾರತ್‌ ಸಂಚಾರ್‌ ನಿಗಮ ನಿಯಮಿತದ(ಬಿಎಸ್‌ಎನ್‌ಎಲ್‌)ಫೈಬರ್‌ ಫ್ರಾಂಚೈಸಿ ಅಸೋಸಿಯೇಷನ್‌ನಿಂದ  ಪ್ರತಿಭಟನೆ ನಡೆಸಲಾಯಿತು.

ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ..ಕುರಿ ಕಾಯೋನು! ..420..!

ಟ್ರಿನಿಟಿ ವೃತ್ತದ ಬಿಎಸ್‌ಎನ್‌ಎಲ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಫ್ರಾಂಚೈಸಿಗಳು ಮತ್ತು ನೌಕರರು, ಸಂಬಳ ನೀಡಬೇಕಾದ 30 ಕೊಟಿ ರು. ನೀಡದೇ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ. ಕೂಡಲೇ ಸಂಬಳ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದು ಎಚ್ಚರಿಸಿದರು.