ಧರ್ಮೇಗೌಡ್ರು ಕೊನೆ ಬಾರಿ ಕರೆ ಮಾಡಿ ಮಾತನಾಡಿದ್ದು ಯಾರ ಜೊತೆ?

Dec 29, 2020, 11:20 AM IST

ಬೆಂಗಳೂರು (ಡಿ. 29): ಉಪಾಸಭಾಪತಿ ಧರ್ಮೇಗೌಡ ಕಡೂರು ತಾಲೂಕಿನ ಗುಣಸಾಗರದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಸಂಜೆ 4.30 ಸುಮಾರಿಗೆ ಅಲ್ಲಿಗೆ ಬರ್ತಾರೆ. ಹುಬ್ಬಳ್ಳಿ ಟ್ರೈನ್‌ಗೆ ಯಾರೊ ಬರ್ತಾರೆ. ಕರ್ಕೊಂಡು ಬರಬೇಕು. ನೀನು ಇಲ್ಲೆ ಇರು ಎಂದು ಡ್ರೈವರ್‌ಗೆ ಹೇಳಿ ಹೋಗ್ತಾರೆ. ಅಲ್ಲಿಂದ ಸ್ಥಳೀಯ ಶ್ರೀಧರ್‌ಗೆ ಕರೆ ಮಾಡಿ ರೈಲಿನ ಸಮಯದ ಬಗ್ಗೆ ವಿಚಾರಿಸ್ತಾರೆ. ಆತ್ಮಹತ್ಯೆಯ ಬಗ್ಗೆ ನಮಗೆ ಸುಳಿವು ಸಿಕ್ಕಿಲ್ಲ' ಎಂದು ಸ್ಥಳೀಯ ಶ್ರೀಧರ್ ಹೇಳಿದ್ದಾರೆ. ಸುವರ್ಣ ನ್ಯೂಸ್ ಜೊತೆ ಮಾತುಕತೆಯ ಬಗ್ಗೆ ಮಾತನಾಡಿದ್ದಾರೆ. 

'ಹುಬ್ಬಳ್ಳಿ ಟ್ರೈನ್‌ಗೆ ಹೇಮಂತ್ ಬರ್ತಾರೆ, ಕಾಯ್ಬೇಕು ಅಂತ ಕಾರಿನಿಂದ ಇಳಿದು ಹೋಗಿದ್ರು'