Oct 21, 2021, 11:44 AM IST
ಬೆಂಗಳೂರು(ಅ.21): ದೇಶದಲ್ಲಿ ಕೊರೋನಾ ಲಸಿಕೆ ಹೊಸ ಕ್ರಾಂತಿಯನ್ನ ಬರೆದಿದೆ. ಹೌದು, 9 ತಿಂಗಳಲ್ಲಿ 100 ಕೋಟಿ ವ್ಯಾಕ್ಸಿನ್ ನೀಡಿದ ಭಾರತ. ಈ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ, ಕೋವಿಡ್ ಟಾಸ್ಕ್‌ಪೋರ್ಸ್ ಸದಸ್ಯ ಡಾ. ಸಿ.ಎನ್. ಮಂಜುನಾಥ್, ಭಾರತಕ್ಕೆ ಇದೊಂದು ಐತಿಹಾಸಿಕ ದಿನವಾಗಿದೆ. ದೇಶದಲ್ಲಿ ಸುಮಾರು 130 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ 100 ಕೋಟಿ ಡೋಸ್ ಲಸಿಕೆ ಕೊಟ್ಟಿರುವುದು ದೊಡ್ಡ ಸಾಧನೆಯಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯಗಳು, ಆರೋಗ್ಯ ಇಲಾಖೆಯ ಕಾರ್ಯಕರ್ತರು ಸೇರಿದಂತೆ ಜನರನ್ನೂ ಕೂಡ ಅಭಿನಂದಿಸಬೇಕು ಅಂತ ತಿಳಿಸಿದ್ದಾರೆ.
Vaccination: 100 ಕೋಟಿ ಡೋಸ್ ಲಸಿಕೆ, ವಿಶ್ವದಾಖಲೆ ಬರೆಯಲು ಭಾರತ ಸಜ್ಜು!