Nov 24, 2021, 11:35 AM IST
ಬೆಳಗಾವಿ(ನ.24): ಎಸಿಬಿ ದಾಳಿ ವೇಳೆ ಬೆಳಗಾವಿಯ ನಾತಾಜಿ ಪಾಟೀಲ್ ಮನೆಯಲ್ಲಿ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಹೌದು, ವೈಭವ್ ನಗರದ ನಿವಾಸದಲ್ಲಿ ಡಾಲರ್ ನೋಟುಗಳು ಪತ್ತೆಯಾಗಿದೆ. ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಮತ್ತು ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೆಸ್ಕಾಂನಲ್ಲಿ ನಾತಾಜಿ ಲೈನ್‌ಮೆಕ್ಯಾನಿಕ್ ಗ್ರೇಡ್ ಕೆಲಸ ನಿರ್ವಹಿಸುತ್ತಿದ್ದಾನೆ. ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ಪರಿಶೀಲನೆ ಮುಂದುವರೆಸಿದ್ದಾರೆ. ಬೆಳಗಾವಿ ನಗರದ ಕಚೇರಿ, ಮನೆ ಸೇರಿ ಒಟ್ಟು ಮೂರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ACB Raid: ಏಕಕಾಲದಲ್ಲಿ 60 ಕಡೆ ದಾಳಿ, ಭ್ರಷ್ಟರಿಗೆ ನಡುಕ ಹುಟ್ಟಿಸಿದ ಅಧಿಕಾರಿಗಳು