Dec 9, 2020, 3:46 PM IST
ಬೆಂಗಳೂರು (ಡಿ. 09): ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಮಾಡು ಇಲ್ಲವೇ ಮಡಿ' ಎನ್ನುವುದಕ್ಕೆ ರೈತರು ಸಿದ್ಧವಾಗಿದ್ದಾರೆ.
ಸರ್ಕಾರದ ಹಠವಾದಿ ಧೋರಣೆಯನ್ನು ಖಂಡಿಸುತ್ತಾ, 'ನಾವು ಇಷ್ಟು ಪ್ರತಿಭಟನೆ ಮಾಡುತ್ತಿದ್ದರೂ ಒಂದಿಂಚು ಹಿಂದೆ ಹೋಗುವ ಕೆಲಸ ಮಾಡುತ್ತಿಲ್ಲ. ನಾವು ಮಾಡೋದು ಮಾಡ್ತೀವಿ, ನೀವು ಸುಮ್ಮನಿರಿ ಎನ್ನುವ ಧೋರಣೆ ತೋರಿಸ್ತಾ ಇದಾರೆ. ನಾವು ಸುಮ್ಮನೆ ಇರೋಕೆ ಆಗಲ್ಲ. ನಮ್ಮನ್ನು ಅಲ್ಲಲ್ಲಿ ತಡೆಯುತ್ತಿದ್ದಾರೆ. ಕೇಸ್ ಹಾಕ್ತೀವಿ ಅಂತ ಹೆದರಿಸ್ತಾರೆ. ಇವೆಲ್ಲಾ ಜಾಸ್ತಿ ದಿನ ನಡೆಯೊದಿಲ್ಲ' ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲ: ಕೋಡಿಹಳ್ಳಿ ಖಡಕ್ ಮಾತು ಕೇಳಿ..!
ಕುಮಾರಸ್ವಾಮಿ ರೈತರ ಹೆಸರು ಹೇಳಿಕೊಂಡು, ಮಣ್ಣಿನ ಮಗನ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸಿದ್ದಾರೆ. ಕುಮಾರಸ್ವಾಮಿ ಮಾಡಿರುವ ಅಪರಾಧವನ್ನು ಈ ಮಣ್ಣು ಒಪ್ಪುವುದಿಲ್ಲ. ರೈತರ ಬಾಯಿಗೆ ಮಣ್ಣು ಹಾಕಿದ್ದೀರಿ. ನಿಮ್ಮನ್ನು ನಾವು ಕ್ಷಮಿಸೋದಿಲ್ಲ' ಎಂದು ಚಂದ್ರಶೇಖರ್ ವಾಗ್ದಾಳಿ ನಡೆಸಿದ್ಧಾರೆ.