Furniture Expo: ಡಿಕೆಶಿ ಭೇಟಿ, ಸಾರ್ವಜನಿಕರಿಂದ ಉತ್ತರ ಪ್ರತಿಕ್ರಿಯೆ

Nov 14, 2021, 3:13 PM IST

ಬೆಂಗಳೂರು (ನ. 14): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆಯ ಸಹಭಾಗಿತ್ವದಲ್ಲಿ ಬೆಂಗಳೂರು ನಿವಾಸಿಗಳಿಗಾಗಿ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ‘ಇಂಡಿಯಾ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಫೋ’ಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದೇ ಸೂರಿನಡಿ ವೈವಿಧ್ಯಮಯ ವಿನ್ಯಾಸ: ಗ್ರಾಹಕರ ಮನಸೂರೆಗೊಂಡ Furniture Expo

ವಾರಾಂತ್ಯದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಮೇಳಕ್ಕೆ ಭೇಟಿ ನೀಡಿದರು. ಮಕ್ಕಳ ಸಮೇತ ಬಂದಿದ್ದ ಜನ ಎಕ್ಸ್‌ಪೋದಲ್ಲಿ ಸುತ್ತಾಡಿದರು. ಜೊತೆಗೆ, ಹಲವು ರೀತಿಯ ಪೀಠೋಪಕರಣಗಳು ಸೇರಿದಂತೆ ಅವರಿಗೆ ಇಚ್ಛಿಸಿದ ವಸ್ತುಗಳನ್ನು ಖರೀದಿಸಲು ಕಾಯ್ದಿರಿಸಿದರು. ಡಿಕೆ ಶಿವಕುಮಾರ್ ಕೂಡಾ ಎಕ್ಸ್‌ಪೋಗೆ ಆಗಮಿಸಿ, ಪರಿಶೀಲಿಸಿದ್ಧಾರೆ.