Dec 28, 2020, 4:21 PM IST
ಬೆಂಗಳೂರು, (ಡಿ.28): ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಜನ್ಮದಿನದ ಅಂಗವಾಗಿ ಹಾಗೂ ಇದೇ ಡಿಸೆಂಬರ್ 31 ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು (ಸೋಮವಾರ) ಮುಖ್ಯಕಾರ್ಯದರ್ಶಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದರು.
ನಿವೃತ್ತರಾಗುತ್ತಿರುವ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ಗೆ ವಿಶೇಷ ಸ್ಮರಣಿಕೆ
ಇನ್ನು ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಹೊಸ ಮುಖ್ಯಕಾರ್ಯದರ್ಶಿ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ನಾಲ್ಕೈದು ಹೆಸರುಗಳು ಕೇಳಿ ಬಂದಿವೆ. ಹಾಗಾದ್ರೆ, ಆ ನಾಲ್ಕು ಹೆಸರುಗಳಾವುವು? ಯಾರಾಗ್ತಾರೆ ಹೊಸ ಮುಖ್ಯಕಾರ್ಯದರ್ಶಿ?