Dec 23, 2024, 4:55 PM IST
ಸಾವಿನ ಶನಿವಾರ.. ಕರಾಳ ಭಾನುವಾರ.. ಡೆಡ್ಲಿ ಡಿಸೆಂಬರ್..! 2 ದಿನ.. 5 ಆಕ್ಸಿಡೆಂಟ್..15 ಬಲಿ.. ಕೂತಲ್ಲೇ ಖಲ್ಲಾಸ್..! ಭಯಾನಕ.. ಭೀಭತ್ಸ.. ಒಂದಕ್ಕಿಂತ ಒಂದು ಭೀಕರ ದೃಶ್ಯ..! ಡಿಸೆಂಬರ್’ನಲ್ಲೇ ಸಾವಿನ ರಣಕೇಕೆ.. ಏನಿದು ಶಾಪ..? ಯಮರಾಯ ರಾಜ್ಯದಲ್ಲಿ ಕೇಕೆ ಹಾಕಿದ್ದಾನೆ. ಶನಿವಾರ ಒಂದೇ ದಿನಕ್ಕೆ ರಾಜ್ಯದಲ್ಲಿ ಘಟಿಸಿದ್ದ ಭಯಾನಕ ಸಾವಿನ ರೌದ್ರ ನರ್ತನವೇ ಆಗಿದೆ. ವಿಜಯಪುರ, ಬೆಂಗಳೂರು, ರಾಯಚೂರು ಮತ್ತು ಮಂಡ್ಯ ಸೇರಿದಂತೆ ಯಮರಾಯ ಕರುಣೆ ಇಲ್ಲದೆ ಸಾವುಗಳನ್ನು ಹೊತ್ತು ಹೋಗಿದ್ದಾನೆ. ಪ್ರತಿ ವರ್ಷ ಡಿಸೆಂಬರ್ ಬಂದ್ರೆ ಹೀಗೆನೇ ಯಮರಾಯ ಆಕ್ಟಿವ್ ಆಗಿರ್ತಾನೆ. ಕುರುಣೆ ಅನ್ನೋದನ್ನೇ ಮರೆತು ಬಿಟ್ಟಿರ್ತಾನೆ.