ಕೊರೋನಾದಿಂದ ರಕ್ಷಣೆಗೆ ಪೊಲೀಸ್‌ ಠಾಣೆಯಲ್ಲೇ ಕಷಾಯ..!

Jul 8, 2020, 12:43 PM IST

ಬೆಂಗಳೂರು (ಜು. 08): ಇಲ್ಲಿ ಪೊಲೀಸರಿಗೆ ದಿನೇ ದಿನೇ ಕೊರೊನಾ ಸೋಂಕು ತಗಲುತ್ತಿರುವುದು ಹೆಚ್ಚಾಗಿದೆ. ಇದುವರೆಗೂ 400 ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಇದರ ಮಧ್ಯೆ ಒಂದು ಠಾಣೆ ಮಾತ್ರ ಮಾದರಿಯಾಗಿದೆ. ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಗೆ ಮಾತ್ರ ಕೊರೊನಾ ಕಾಲಿಡದಂತೆ ಪೊಲೀಸರು ಮದ್ದು ಅರೆಯುತ್ತಿದ್ದಾರೆ. ಕೆಲಸಕ್ಕೆ ಬಂದ್ರೂ ಠಾಣೆಯ 75 ಮಂದಿಯೂ ಸೇಫ್ ಆಗಿದ್ದಾರೆ. ಹಾಗಾದರೆ ಏನು ಮದ್ದು ಮಾಡುತ್ತಿದ್ದಾರೆ ಅಂತ ನೋಡಿದ್ರೆ ಲವಂಗ, ಚಕ್ಕೆ, ಮೊಗ್ಗು, ಧನಿಯಾ, ಅರಿಶಿನ, ಶುಂಠಿ ಸೇರಿದಂತೆ ಔಷಧೀಯ ಪದಾರ್ಥಗಳನ್ನು ಸೇರಿಸಿ ಆಯುರ್ವೇದ ಕಷಾಯ ಮಾಡಿ ಸೇವಿಸುತ್ತಿದ್ದಾರೆ. ಇದು ಅವರಿಗೆ ಸಹಾಯಕವಾಗಿದೆ. 

ದೇಶದಲ್ಲಿ ಪ್ರತಿ 10 ಲಕ್ಷ ಜನರಿಗೆ 14 ಮಂದಿ ಸಾವು: ವಿಶ್ವದಲ್ಲೇ ಅತಿ ಕಡಿಮೆ!