May 25, 2022, 1:34 PM IST
ಚಿಕ್ಕಮಗಳೂರು (ಮೇ. 25): ಸಬ್ ರಿಜಿಸ್ಟಾರ್ (Sub Register) ಕಚೇರಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಸಬ್ ರಿಜಿಸ್ಟಾರ್ ಕಚೇರಿ ಸರ್ಕಾರಿ ಕಟ್ಟಡದಿಂದ ದೂರ ಉಳಿದಿದೆ. ಸುಸಜ್ಜಿತವಾದ ಸರ್ಕಾರಿ ಕಟ್ಟಡವಿದ್ದರೂ, ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿನಿತ್ಯ ಕಚೇರಿ ಕೆಲಸಕ್ಕೆಂದು ಬರುವವರು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಬಾಡಿಗೆ ಕಟ್ಟಡದಲ್ಲಿ ಮೂಲಸೌಕರ್ಯವಿಲ್ಲ. ಆದಷ್ಟು ಬೇಗ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಚಿಕ್ಕಮಗಳೂರು ಶಾಸಕ ಸಿಟಿ ರವಿ ಗಮನಕ್ಕೆ ತರಲಾಯಿತು.
Chikkamagaluru: ಹೊಸ ಸರ್ಕಾರಿ ಸುಸಜ್ಜಿತ ಕಟ್ಟಡವಿದ್ರೂ, ಖಾಸಗಿ ಕಟ್ಟಡದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ!
ಬಿಗ್ 3 ವರದಿ ಪ್ರಸಾರವಾಗುತ್ತಲೇ ಡೀಸಿ ರಮೇಶ್, ನೊಂದಣಾಧಿಕಾರಿ ಕರಿಯಮ್ಮ ಆಫೀಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಆದಷ್ಟು ಬೇಗ ಸರ್ಕಾರಿ ಕಟ್ಟಡಕ್ಕೆ ಶಿಫ್ಟ್ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡೀಸಿ ರಮೇಶ್ ಭರವಸೆ ನೀಡಿದರು.