Dec 12, 2020, 11:24 AM IST
ಬೆಂಗಳೂರು (ಡಿ. 12): ಬಿಎಂಟಿಸಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಕೆಲ ಆಟೋ ಚಾಲಕರು ಸಂದರ್ಭದ ಲಾಭ ಪಡೆಯುತ್ತಿದ್ದಾರೆ. ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ. ಮೆಜೆಸ್ಟಿಕ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ 2 ಸಾವಿರ ರೂಪಾಯಿ ಕೇಳುತ್ತಿದ್ದಾರಂತೆ. ಅನುಕೂಲಸ್ಥರು ದುಬಾರಿಯಾದರೂ ಅನಿವಾರ್ಯ ಎಂದು ಹೋದರೆ, ಅಷ್ಟು ಕೊಡಲು ಸಾಧ್ಯವಿಲ್ಲದವರು, ಚಾಲಕರನ್ನು ಶಪಿಸುವ ದೃಶ್ಯ ಸಾಮಾನ್ಯವಾಗಿದೆ. ಮೆಜೆಸ್ಟಿಕ್‌ನಲ್ಲಿ ಕೆಲವು ಆಟೋ ಚಾಲಕರು, ಪ್ರಯಾಣಿಕರು ಮಾತನಾಡಿದ್ದಾರೆ.
ಬಸ್ಸಿಲ್ಲದಿದ್ರೆ ಏನಾಯ್ತು? ನಾವಿದ್ದೀವಲ್ಲ ಎಂದ ನಮ್ಮ ಮೆಟ್ರೋ; ಪ್ರಯಾಣಿಕರಿಗಾಗಿ ಹೆಚ್ಚುವರಿ ಸಂಚಾರ