ಬೆದರಿಕೆಗಳಿಗೆ ಬಗ್ಗಲ್ಲ, ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ; ಕೋಡಿಹಳ್ಳಿ ಎಚ್ಚರಿಕೆ

Dec 11, 2020, 5:07 PM IST

ಬೆಂಗಳೂರು (ಡಿ. 11): ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಮುಂದಿನ ನಡೆ ಏನಾಗಿರಬೇಕೆಂದು, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ರೈತ ಮುಖಂಡರು, ಸಾರಿಗೆ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದಾರೆ. 

ಸವದಿಯವರು ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ: ಕೋಡಿಹಳ್ಳಿ ಆಕ್ರೋಶ

ಪ್ರತಿಭಟನೆ ಇಷ್ಟು ಜೋರಾಗಿದ್ದರೂ, ಸರ್ಕಾರ ಮಾತ್ರ ಕರೆದು ಮಾತಾಡುತ್ತಿಲ್ಲ. ಸಾರಿಗೆ ಸಚಿವರು ಸಭೆ ಕರೆದಿದ್ದಾರೆ. ಆದರೆ ಸಂಘಟನೆಯ ಮುಖಂಡರನ್ನು ಸಭೆಗೆ ಆಹ್ವಾನಿಸಿಲ್ಲ. ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲಾ ನಡೆಯೋದಿಲ್ಲ. ಬೇಡಿಕೆ ಈಡೇರುವವರೆಗೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಚಳುವಳಿ ಮುಂದುವರೆಯುತ್ತದೆ' ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ಧಾರೆ.