ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ, ಪ್ರತಿಭಟನೆ ಕೈ ಬಿಡಿ: ಸಾರಿಗೆ ಸಚಿವರಿಂದ ಮನವಿ

Dec 11, 2020, 12:41 PM IST

ಬೆಂಗಳೂರು (ಡಿ. 11): ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ, ಸಾರಿಗೆ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ಯರಾಜ್ಯದ ಹಲವೆಡೆ ಬಸ್ ಸಂಚಾರ ಸ್ತಬ್ಧವಾಗಿದೆ. ನೌಕರರ ಈ ಪ್ರತಿಭಟನೆ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. 

ಯಶವಂತಪುರ ರಸ್ತೆಯಲ್ಲಿ ಅಡುಗೆ ಮಾಡಿ, ಸಾರಿಗೆ ನೌಕರರ ವಿಶಿಷ್ಟ ಪ್ರತಿಭಟನೆ

'ಸಾರಿಗೆ ನೌಕರರ ಬೇಡಿಕೆ ಇವತ್ತು, ನಿನ್ನೆಯದಲ್ಲ. ಬಹುದಿನಗಳ ಬೇಡಿಕೆಯಾಗಿದೆ. ಒಂದು ನಿಗಮವನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿದರೆ. ಇಡೀ ರಾಜ್ಯದಲ್ಲಿರುವ ಎಲ್ಲಾ ನಿಗಮಗಳಿಂದ ಬೇಡಿಕೆ ಬರುತ್ತದೆ. ಸರ್ಕಾರದ ಮುಂದೆ ಇದು ದೊಡ್ಡ ಸವಾಲು. ಹಾಗಾಗಿ ಕೂಲಂಕುಷವಾಗಿ ಯೋಚನೆ ಮಾಡಬೇಕಾಗಿದೆ. ನಿಮ್ಮ ಉಳಿದೆಲ್ಲಾ ಬೇಡಿಕೆಗಳನ್ನು ಈಡೇರಿಸಲು ನಾವು ಪ್ರಯತ್ನಿಸುತ್ತೇವೆ. ಪ್ರತಿಭಟನೆಯನ್ನು ಕೈ ಬಿಟ್ಟು ಕರ್ತವ್ಯಕ್ಕ ಹಾಜರಾಗಿ' ಎಂದು ವಿನಂತಿಸಿಕೊಂಡಿದ್ದಾರೆ.