ಸಾರಿಗೆ ಸಮರ, ಪ್ರಯಾಣಿಕರು ಅತಂತ್ರ, ಆಟೋ ಚಾಲಕರಿಂದ ಭಾರೀ ಹಣಕ್ಕೆ ಬೇಡಿಕೆ

Dec 11, 2020, 2:04 PM IST

ಬೆಂಗಳೂರು (ಡಿ. 11): ಸಾರಿಗೆ ನೌಕರರ ಪ್ರತಿಭಟನೆ ಇಂದೂ ಮುಂದುವರೆದಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ ಬಂದ್ ಇರುವ ವಿಚಾರ ಗೊತ್ತಿಲ್ಲದೇ ಬಸ್ ನಿಲ್ದಾಣಕ್ಕೆ ಬಂದು ಬಸ್‌ಗಳಿಲ್ಲದೇ ಮೆಜಸ್ಟಿಕ್‌ನಲ್ಲಿ ಪ್ರಯಾಣಿಕರು ಪರಡಾಡುವಂತಾಯಿತು. ಅನಿವಾರ್ಯವಾಗಿ ಆಟೋ ಕಡೆ ಮುಖ ಮಾಡಿದ್ದು, ಆಟೋ ಚಾಲಕರು ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಕೇಳಿದ್ದಷ್ಟು ದುಡ್ಡು ಕೊಟ್ಟರೇ ಮಾತ್ರ ಆಟೋ ಹತ್ತಿ ಎಂದು ಹೆದರಿಸುತ್ತಿರುವ ಆರೋಪವೂ ಕೇಳಿ ಬಂದಿದೆ. ಮೆಜೆಸ್ಟಿಕ್‌ನಿಂದ ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ. ಹೇಗಿದೆ ಅಲ್ಲಿನ ಸ್ಥಿತಿ? ನೋಡೋಣ ಬನ್ನಿ..!

ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ, ಪ್ರತಿಭಟನೆ ಕೈ ಬಿಡಿ: ಸಾರಿಗೆ ಸಚಿವರಿಂದ ಮನವಿ