BIG 3 : ಜಮೀನು ಮಂಜೂರಾದ್ರೂ ಹಂಚಿಕೆ ಆಗಿಲ್ಲ, ಇವರ ಗೋಳು ಕೇಳೋರಿಲ್ಲ, ಅಧಿಕಾರಿಗಳೇ ಎದ್ದೇಳಿ..

Mar 16, 2021, 3:01 PM IST

ಬೆಂಗಳೂರು (ಮಾ. 16): ತುಮಕೂರು ಜಿಲ್ಲೆ ಕೊರಟಗೆರೆ ತಾ. ಎಸ್ ಗೊಲ್ಲಹಳ್ಳಿ ಗ್ರಾಮದ ಗ್ರಾಮಸ್ಥರು ನಿವೇಶನಕ್ಕಾಗಿ ಕಳೆದ 10 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳಿವೆ. ದಲಿತರೇ ಹೆಚ್ಚಿರುವ ಈ ಗ್ರಾಮದಲ್ಲಿ ಗುಡಿಸಲಿನಲ್ಲೇ ವಾಸವಾಗಿದ್ದಾರೆ. 2 ವರ್ಷದೊಳಗೆ ನಿವೇಶಕ ಹಂಚಿಕೆ ಮಾಡುವಂತೆ ಆದೇಶವನ್ನೂ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 

ಜಮೀನು ಮಂಜೂರಾದ್ರೂ ಹಂಚಿಕೆ ಆಗಿಲ್ಲ, ಸೂರಿಲ್ಲದ ಇವರ ಗೋಳು ಕೇಳೋರಿಲ್ಲದಂತಾಗಿದೆ. ಈ ಬಗ್ಗೆ ಬಿಗ್ 3 ವಿಸ್ತೃತವಾಗಿ ವರದಿ ಪ್ರಸಾರ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. 

ರಾಸಲೀಲೆ ಕೇಸ್: ಸೀಡಿ ಲೇಡಿ ಸ್ನೇಹಿತೆ ಬಾಯ್ಬಿಟ್ಟಳು ಸ್ಫೋಟಕ ಸತ್ಯ..!