Mar 23, 2021, 2:43 PM IST
ಬೆಂಗಳೂರು (ಮಾ. 23): ದಾವಣಗೆರೆ ಜಗಳೂರಿನ ಗೊಲ್ಲರಹಟ್ಟಿಯಲ್ಲಿ ತಾಯಿ- ಮಗುವಿಗೆ ಊರಿನ ಜನ ಬಹಿಷ್ಕಾರ ಹಾಕಿದ್ದರು. ಅವರು ಆಚೆ ಬರದಂತೆ ಮುಳ್ಳಿನ ಬೇಲಿ ಹಾಕಿದ್ದರು. ಈ ಅನಿಷ್ಠ ಪದ್ಧತಿಯ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡಿತ್ತು. ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿ , ಎಸ್‌ಪಿ ಧಾವಿಸಿ ಮಗುವಿನ ನಾಮಕರಣವನ್ನೂ ಮಾಡಿದ್ದರು. ಇಂದು ಆ ಮಗುವಿಗೆ ಜಿಲ್ಲಾಡಳಿತವೇ ಜವಳ ಕಾರ್ಯಕ್ರಮವನ್ನೂ ಮಾಡಿದೆ. ಇದು ಬಿಗ್ 3 ವರದಿಯ ಸಾರ್ಥಕ.