BIG 3 Heroes: ಮಂಗಳಮುಖಿ ವೈಷ್ಣವಿಯ ಮಾನವೀಯತೆಯ ಕೆಲಸಕ್ಕೆ ಸಲಾಂ!

Jun 4, 2022, 5:32 PM IST

ಶಿವಮೊಗ್ಗ (ಜೂ.04):  ಮಂಗಳಮುಖಿಯರು (Transgender) ಅಂದ್ರೆ ಭಯ, ಕುತೂಹಲ, ಅಸಡ್ಡೆ, ಅಸ್ಪೃಶ್ಯತೆ ಇದೆ. ಸಾರ್ವಜನಿಕವಾಗಿ ಅವರ ಜೊತೆ ಯಾರೂ ಅಷ್ಟಾಗಿ ಬೆರೆಯುವುದಿಲ್ಲ, ದೂರ ಇಡುವುದನ್ನು ಕಾಣುತ್ತೇವೆ. ಅವರಲ್ಲೂ ಒಳ್ಳೆಯವರು, ಒಳ್ಳೆಯತನ, ಮಾನವೀಯತೆ ಇದೆ ಅನ್ನೋದನ್ನ ಮರೆತು ವರ್ತಿಸಲಾಗುತ್ತದೆ. ಇಲ್ಲೊಬ್ಬ ಮಂಗಳಮುಖಿಯ ಮಾದರಿ ಕೆಲಸ ನೋಡಿದರೆ, ಕೈ ಮುಗಿಯಬೇಕು ಅನಿಸಿದರೂ ಅಚ್ಚರಿ ಇಲ್ಲ. ಶಿವಮೊಗ್ಗದ ವೈಷ್ಣವಿ ಎಂಬ ಮಂಗಳಮುಖಿ ತಾವು ಇರುವ ಬೊಮ್ಮನಕಟ್ಟೆ ಏರಿಯಾಗೆ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಬಡವರಿಗೆ ದಿನಸಿ ಹಂಚಿಕೆ, ಬಡ ಮಕ್ಕಳಿಗೆ ಶಾಲಾ ಫೀಸ್, ಬುಕ್, ಪೆನ್ನು ಎಲ್ಲಾ ಕೊಡಿಸ್ತಾರೆ. ಇವರ ಸಮಾಜಮುಖಿ ಕೆಲಸಗಳಿಗೆ ಸಲಾಂ! 

BIG 3 Hero: 14 ಸಾವಿರಕ್ಕೂ ಹೆಚ್ಚು ಬೇವಿನ ಮರ ಬೆಳೆಸಿದ ತುಮಕೂರು ವೃಕ್ಷಪ್ರೇಮಿ ಸಿದ್ದಪ್ಪ..!