ಅಧಿಕಾರಿಗಳೇ ಎದ್ದೇಳಿ, ಈ ವಿಶೇಷ ಚೇತನರಿಗೆ ಮಾಸಾಶನ ಕೊಡುವ ವ್ಯವಸ್ಥೆ ಮಾಡಿ

Dec 21, 2020, 3:00 PM IST

ಮಂಗಳೂರು (ಡಿ. 21): ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಂಡೂರು ಗ್ರಾಮದ ಶ್ರೀಧರ್ ಆಚಾರ್ಯ ಕುಟುಂಬದ ಇಬ್ಬರು ಮಕ್ಕಳು ಅಂಗವೈಕಲ್ಯದಿಂದ ನರಳುತ್ತಿದ್ದಾರೆ. ಎದ್ಧೇಳೋದಕ್ಕೂ ಆಗದೇ ನಾಲ್ಕು ಗೋಡೆಗಳ ಮಧ್ಯೆ ತೆವಳಿಕೊಂಡು ಬದುಕು ಸವೆಸುತ್ತಿದ್ದಾರೆ. ಮನೆಯಲ್ಲೂ ಬಡತನ.

ದಾವಣಗೆರೆ ಬಿಸಿಎಂ ಹಾಸ್ಟೆಲ್ ಕರ್ಮಕಾಂಡ; ಜ. 01 ರಿಂದ ಹೊಸ ಹಾಸ್ಟೆಲ್‌ಗೆ ಶಿಫ್ಟ್

ಸದ್ಯ 62 ವರ್ಷದ ತಾಯಿ ಲಲಿತಾ ಇಡೀ ಕುಟುಂಬಕ್ಕೆ ಆಸರೆಯಾಗಿದ್ದಾರೆ. ವಯಸ್ಸಾಗಿರುವುದರಿಂದ ಇವರಿಗೂ ದುಡಿಯುವ ಚೈತನ್ಯವಿಲ್ಲ. ಇಬ್ಬರು ಅಂಗವಿಕಲ ಮಕ್ಕಳಿಗೆ 1400 ರೂನಂತೆ ಮಾಸಾಶನ ಬರುತ್ತಿತ್ತು. ಆದರೆ ಕಳೆದ 2 ವರ್ಷಗಳಿಂದ ಮಾಸಾಶನ ಬರದೇ ಈ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವ ಹಾಗಾಗಿದೆ. ಅಧಿಕಾರಿಗಳೇ ದಯವಿಟ್ಟು ಎಚ್ಚೆತ್ತುಕೊಳ್ಳಿ.... ಮಾಸಾಶನ ಕೊಡುವ ವ್ಯವಸ್ಥೆ ಮಾಡಿ..