Feb 13, 2022, 9:49 AM IST
ಬೆಂಗಳೂರು (ಫೆ. 13): ಸಿಎಂ ಬೊಮ್ಮಾಯಿ ಗೃಹ ಕಚೇರಿಯಲ್ಲಿ (Chief Ministers office) ಮಹಾ ಅಕ್ರಮ ನಡೆದಿದೆ. ಕಾರ್ಯಭಾರದ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನವೇ PWD ಇಲಾಖೆ ಇಂಜಿನೀಯರ್ ಕೆ ಬಾಲಚಂದ್ರ ಕಾಮಗಾರಿಗಳಿಗೆ ಸಹಿ ಮಾಡಿದ್ದಾರೆ.
ಸಿಎಂ ಗೃಹ ಕಚೇರಿ ಮೀಡಿಯಾ ಸೆಂಟರ್, ಟೆಲಿಪ್ರಾಮ್ಟರ್ ಅಳವಡಿಕೆ ಕಾಮಗಾರಿ ನಡೆಸಲಾಗಿತ್ತು. ಈ ಕಾಮಗಾರಿಗೆ 99.80 ಲಕ್ಷ ಅಂದಾಜು ವೆಚ್ಚ ಸಿದ್ಧವಾಗಿತ್ತು. ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಬಾಲಚಂದ್ರ ಈ ಕಾಮಗಾರಿಗೆ ಸಹಿ ಹಾಕಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ RTI ಕಾರ್ಯಕರ್ತ ಮರಿಲಿಂಗೇಗೌಡ ಒತ್ತಾಯಿಸಿದ್ದಾರೆ. PWD ಮುಖ್ಯ ಇಂಜಿನೀಯರ್ ತನಿಖೆಗೆ ಆದೇಶಿಸಿದ್ದಾರೆ.