Jul 14, 2023, 2:33 PM IST
ಬೆಳಗಾವಿ (ಜು.14): ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆಗೆ ರಾಕೆಟ್, ಲಾಂಚರ್‌ಗಳ ಬಿಡಿಭಾಗ ತಯಾರಾಗಿದ್ದೇ ಬೆಳಗಾವಿಯಲ್ಲಿ ಎಂಬುದು ಗೊತ್ತಾ?, ಹೌದು ಜಗತ್ತೇ ಕೌತುಕದಿಂದ ಕಾಯುತ್ತಿರುವ ಚಂದ್ರಯಾನ-3 ರಾಕೇಟ್‌ಗೆ ಬಳಸಿದ್ದ ಬಿಡಿಭಾಗ ತಯಾರಿಕೆಯಾಗಿದ್ದು ಕುಂದಾನಗರಿಯಲ್ಲಿ. ಬೆಳಗಾವಿಯ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈ ಲಿಮಿಟೆಡ್‌ನಲ್ಲಿ (Servocontrols & Hydraulics India Pvt.Ltd) ಬಿಡಿಭಾಗ ತಯಾರಿಕೆ ಮಾಡಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈ ಲಿಮಿಟೆಡ್ (Servo Controls Aerospace India Pvt Ltd) ಎಂಡಿ ದೀಪಕ್ ಧಡೂತಿ ಪ್ರತಿಕ್ರಿಯೆ ನೀಡಿದ್ದಾರೆ. ಚಂದ್ರಯಾನ-3 ಪ್ರಯಾಣ ಬೆಳೆಸಲಿರುವ ರಾಕೆಟ್, ಲಾಂಚರ್‌ಗೆ ಬಿಡಿಭಾಗ ನಾವೇ ತಯಾರಿಸಿದ್ದೇವೆ. ಚಂದ್ರಯಾನ-2 ಕೊನೆಯ ಘಳಿಗೆಯಲ್ಲಿ ವಿಫಲವಾಯಿತು, ಚಂದ್ರಯಾನ-3 ಯಶಸ್ವಿಯಾಗಲಿದೆ. ಇಸ್ರೋ ಜೊತೆಗೆ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈ ಲಿ 15 ವರ್ಷಗಳಿಂದ ಕೆಲಸ ಮಾಡುತ್ತಿದೆ. ಈ ಹಿಂದೆ ಮಂಗಳಯಾನ ಯಶಸ್ವಿಯಾದ ರಾಕೆಟ್‌ಗೂ ಬೆಳಗಾವಿಯಿಂದಲೇ ಬಿಡಿಭಾಗ ಪೂರೈಸಲಾಗಿತ್ತು. ಸ್ವದೇಶಿ-ವಿದೇಶಿ ಟೆಕ್ನಾಲಜಿ ಬಳಸಿ ಬಿಡಿಭಾಗಗಳನ್ನು ಇಸ್ರೋಗೆ ಪೂರೈಕೆ ಮಾಡಲಾಗಿದೆ. ಇಸ್ರೋ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ, ಇದು ಕರುನಾಡೇ ಹೆಮ್ಮೆ ಪಡುವ ಸಂಗತಿ ಎಂದು ದೀಪಕ್ ಧಡೂತಿ ಪ್ರತಿಕ್ರಿಯೆ ನೀಡಿದ್ದಾರೆ.