Dec 28, 2020, 4:40 PM IST
ಬೆಂಗಳೂರು (ಡಿ. 28): ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಹಾರುವವರೆಗೆ ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದು ಕಳೆದ 15 ವರ್ಷಗಳಿಂದ ಕಸ್ತೂರಿ ಭಾವೆಯವರು ಚಪ್ಪಲಿ ಹಾಕುತ್ತಿರಲಿಲ್ಲ. ಇಂದು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಧ್ವಜ ಹಾರಿಸಿ ಕಸ್ತೂರಿ ಭಾವೆಯವರಿಗೆ ಚಪ್ಪಲಿ ನೀಡಿದ್ದಾರೆ. ಪಾಲಿಕೆ ಎದುರು ಸ್ಥಾಪಿಸಿರುವ ಧ್ವಜಸ್ಥಂಭವನ್ನು ಪೊಲೀಸರು ತೆರವುಗೊಳಿಸಿದ್ರೆ ಅಹೋರಾತ್ರಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಲು ಹೈಡ್ರಾಮ; ಕಾರ್ಯಕರ್ತರು, ಪೊಲೀಸರ ನಡುವೆ ವಾಗ್ವಾದ