ಟೆಕ್ಕಿ ಅತುಲ್ ಸುಭಾಷ್ ಪ್ರಕರಣಕ್ಕೆ ಟ್ವಿಸ್ಟ್, ಪೊಲೀಸರ ಮುಂದೆ ಸ್ಫೋಟಕ ಹೇಳಿಕೆ ನೀಡಿದ ಪತ್ನಿ!

Dec 18, 2024, 5:27 PM IST

ಬೆಂಗಳೂರು(ಡಿ.18) ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇತ್ತ ಆರೋಪಿಗಳನ್ನು ಬಂದಿಸಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಮುಖ ಆರೋಪಿ ಅತುಲ್ ಸುಭಾಷ್ ಪತ್ನಿ ನಿಖಿತಾ ವಿಚಾರಣೆ ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಘಟನೆಯಲ್ಲಿ ನಿಜವಾದ ಸಂತ್ರಸ್ತೆ ನಾನೇ ಎಂದು ನಿಖಿತಾ ಹೇಳಿದ್ದಾರೆ. ಚಿಕನ್, ಮಾಂಸ ತಂದು ಅಡುಗೆ ಮಾಡುವಂತೆ ಟಾರ್ಚರ್ ಮಾಡುತ್ತಿದ್ದ. ನನಗೆ ಮಾಂಸಾಹಾರ ಅಡುಗೆ ಬರುತ್ತಿರಲಿಲ್ಲ. ಕೆಲ ವಿಚಾರಗಳನ್ನು ನನಗೆ ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ನಿಖಿತಾ ಹೇಳಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ನಿಖಿತಾ ಹೇಳಿದ್ದೇನು?