Aug 15, 2021, 3:10 PM IST
ತುಮಕೂರು (ಆ. 15): ಇಲ್ಲಿನ ಕರಿಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಧ್ವಜಸ್ಥಂಭ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ 16 ವರ್ಷದ ಚಂದನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಸ್ವಾತಂತ್ರೋತ್ಸವದಲ್ಲಿ ಭಾಗಿಯಾಗಲು ಇಂದು ಬೆಳಿಗ್ಗೆ ಪವನ್, ಚಂದನ್ ಹಾಗೂ ಶಶಾಂಕ್ ಬಂದಿದ್ದರು. ಧ್ವಜಾರೋಹಣಕ್ಕೆ ಶಿಕ್ಷಕರು ಸಿದ್ಧತೆ ನಡೆಸಿದ್ದರು. ಈ ವೇಳೆ ಧ್ವಜ ಸ್ಥಂಭ ಕಟ್ಟುವಂತೆ ಬಾಲಕರಿಗೆ ಶಿಕ್ಷಕರು ಸೂಚನೆ ನೀಡಿದ್ದಾರೆ. ಧ್ವಜಸ್ಥಂಭ ಕಟ್ಟುವ ವೇಳೆ ಶಾಲೆ ಮೇಲೆ ಹಾದು ಹೋಗಿದ್ದ ತಂತಿಗೆ ಧ್ವಜಸ್ಥಂಭ ಸ್ಪರ್ಶಿಸಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಚಂದನ್ ಸಾವನ್ನಪ್ಪಿದರೆ, ಶಶಾಂಕ್ ಹಾಗೂ ಪವನ್‌ಗೆ ಗಾಯಗಳಾಗಿದೆ. ಶಿಕ್ಷಕರ ನಿರ್ಲಕ್ಷ್ಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.