Sep 10, 2019, 3:50 PM IST
ಬೆಂಗಳೂರು[ಸೆ.10]: ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ವಿಶ್ವಕಪ್ ಜಯಿಸಿದ ಸಾಧನೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಬರೋಬ್ಬರಿ ಆರು ಬಾರಿ ವಿಶ್ವಕಪ್ ಗೆಲ್ಲುವ ಮೂಲಕ ಕಾಂಗರೂ ಪಡೆ ಕ್ರಿಕೆಟ್ ಸಾಮ್ರಾಟನಾಗಿ ಬೆಳೆದು ನಿಂತಿದೆ. ಇನ್ನು ಟೆನಿಸ್’ನಲ್ಲೂ ಅಧಿಪತಿಯಾಗಲು ಮೂವರು ಟೆನಿಸ್ ದಿಗ್ಗಜರ ನಡುವೆ ಪೈಪೋಟಿ ಜೋರಾಗಿದೆ. ಸ್ವಿಸ್ ಟೆನಿಸ್ ದಂತಕತೆ ರೋಜರ್ ಫೆಡರರ್, ಸರ್ಬಿಯಾದ ನೋವಾಕ್ ಜೋಕೋವಿಚ್ ಹಾಗೂ ಸ್ಪೇನ್ ಟೆನಿಸ್ ಸಾಮ್ರಾಟ ರಾಫೆಲ್ ನಡಾಲ್ ನಡುವೆ ಅತಿಹೆಚ್ಚು ಗ್ರ್ಯಾಂಡ್’ಸ್ಲಾಂ ಗೆದ್ದ ಆಟಗಾರ ಎನಿಸಿಕೊಳ್ಳಲು ಸಿಕ್ಕಾಪಟ್ಟೆ ಸ್ಪರ್ಧೆ ಏರ್ಪಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..