Oct 25, 2019, 6:00 PM IST
ಶಿವಮೊಗ್ಗ[ಅ. 25] ಸಿಎಂ ತವರು ಜಿಲ್ಲೆಯ ಗುಂಡಿ ಬಿದ್ದ ರಸ್ತೆಗಳ ದುಸ್ಥಿತಿ ಈ ಪ್ರತಿಭಟನೆಯತಲ್ಲಿ ಅನಾವರಣವಾಯಿತು. ರಸ್ತೆಗಳೋ ಕೆರೆಯೋ ತಿಳಿಯದಾಗಿದೆ ಎಂದು ವಿದ್ಯಾರ್ಥಿ ಸಂಘಟನೆಯ ವಿನಯ್ ರಾಜಾವತ್ ನೇತೃತ್ವದಲ್ಲಿ ಶಿವಮೊಗ್ಗ ನಗರದ ಪಾರ್ಕ್ ಬಡಾವಣೆಯ ಮುಖ್ಯ ರಸ್ತೆಯಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ, ಸಚಿವ ಈಶ್ವರಪ್ಪ ರಿಗೆ,ಸಂಸದ ಬಿ.ವೈ.ರಾಘವೇಂದ್ರರಿಗೆ ಧಿಕ್ಕಾರ, ಬರಬೇಕಪ್ಪ ಬರಬೇಕು ಜಿಲ್ಲಾಧಿಕಾರಿಗಳು ಬರಬೇಕು, ಸರ್ಕಾರ ಅಂತೆ ಸರ್ಕಾರ ಅವರಪ್ಪಂದಂತೆ ಸರ್ಕಾರ, ಬೇಕೇ ಬೇಕು ನ್ಯಾಯಬೇಕು ಎಂಬ ಘೋಷಣೆ ಆಕ್ರೋಶ ಹೊರಹಾಕಿದರು.
ರಸ್ತೆಗಳಲ್ಲಿ ಗುಂಡಿ ಮುಚ್ಚದೆ ಇರುವುದರ ವಿರುದ್ಧ ಮಳೆಯಿಂದಾಗಿ ನೀರು ನಿಂತಿದ್ದು ಇದನ್ನ ಅಣಕಿಸುವಂತೆ ನೀರಿನಲ್ಲಿ ಕೊರಗ ಮೀನನ್ನ ಹಿಡಿದು ಹಾಗೂ ಭತ್ತ ನಾಟಿ ಮಾಡುವ ಮೂಲಕ ವಿದ್ಯಾರ್ಥಿ ಸಂಘಟನೆ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿತು.