ಯುವ v/s ಜಿಮ್ಮಿ: ಗೆಲ್ಲೋದ್ಯಾರು? ಆಗಲೇ ಶುರು ಅಭಿಯಾನ

Jun 28, 2023, 5:46 PM IST

ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಯುವರಾಜ್ ಕುಮಾರ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯುವ ಈಗಾಗಲೇ ಯವ ಹೆಸರಿನ ಸಿನಿಮಾ ಮೂಲಕವೇ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಇನ್ನೂ ಇದೇ ಸಮಯಕ್ಕೆ ಕಿಚ್ಚ ಸುದೀಪ್ ಕುಟುಂಬದಿಂದ ಮತ್ತೋರ್ವ ಕಲಾವಿದ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸುದೀಪ್ ಅಕ್ಕನ ಮಗ ಸಂಚಿತ್. ಚಿತ್ರಕ್ಕೆ ಜಿಮ್ಮಿ ಎಂದು ಟೈಟಲ್ ಇಡಲಾಗಿದ್ದು ಈಗಾಗಲೇ ಟೀಸರ್ ಮೂಲಕ ಸದ್ದು ಮಾಡುತ್ತಿದ್ದಾರೆ. ಯುವ ಮತ್ತು ಜಿಮ್ಮಿಯಲ್ಲಿ ಗೆಲ್ಲೋರು ಯಾರು ಎನ್ನುವ ಚರ್ಚೆ ಶುರುವಾಗಿದೆ.