ಹಠಮಾರಿ ದರ್ಶನ್: ಜೈಲಲ್ಲಿ ಕೇಳಿದ್ದೆಲ್ಲ ಕೊಟ್ಟರೂ ದಾಸನಿಗಿಲ್ಲ ಸಮಾಧಾನ!

Oct 18, 2024, 12:24 PM IST

ಸರ್ಜಿಕಲ್ ಚೇರ್ ನಂತರ ದರ್ಶನ್‌ಗೆ ಮೆಡಿಕಲ್ ಬೆಡ್ ಮತ್ತು ಚೇರ್ ಸೌಲಭ್ಯ..! ಕೇಳಿದ್ದೆಲ್ಲ ಕೊಟ್ಟರೂ ದಾಸನಿಗಿಲ್ಲ ಸಮಾಧಾನ..! ಬಳ್ಳಾರಿಯಲ್ಲಿ ಟ್ರೀಟ್ಮೆಂಟ್ ಬೇಡ ಎಂದಿದ್ದೇಕೆ ದರ್ಶನ್..? ಜೈಲ್’ನಲ್ಲಿ ಕಂಗಾಲು.. ದೀಪಾವಳಿಗಾದ್ರೂ  ಸಿಗುತ್ತಾ ಬೇಲು..? ದರ್ಶನ್ ಬಳ್ಳಾರಿ ಜೈಲಿಗೆ ಹೋಗಿ ಇಂದಿಗೆ 50 ದಿನಗಳಾಯ್ತು. ಈ 50 ದಿನಗಳಲ್ಲಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ತುಂಬಾನೇ ಕಷ್ಟ ಅನುಭವಿಸಿದ್ದಾನೆ. ಜೊತೆಗೆ ಬಳ್ಳಾರಿ ಜೈಲು ಸಿಬ್ಬಂದಿಗೂ ಕಾಟ ಕೊಟ್ಟಿದ್ದಾನೆ. ಆರಂಭದಲ್ಲಿ ಸರ್ಜಿಕಲ್ ಚೇರ್ಗೆ ಬೇಡಿಕೆ ಇಟ್ಟ. ಅದನ್ನೂ ಕೊಡಲಾಯ್ತು. ಈಗ ವೈದ್ಯರ ಸಲಹೆ ಮೇರೆಗೆ ಮೆಡಿಕಲ್ ಬೆಡ್ ಕೊಡಲಾಗಿದೆ. ಆದರೂ ದರ್ಶನ್ಗೆ ನೆಮ್ಮದಿ, ಸಮಾಧಾನವಿಲ್ಲ. ಯಾಕೆಂದ್ರೆ ದರ್ಶನ್ಗೆ ಆದಷ್ಟು ಬೇಗ ಬೇಲಾದ್ರೂ ಸಿಗಬೇಕಿದೆ ಅಥವಾ ಬಳ್ಳಾರಿ ಜೈಲಿನಿಂದ ಬೆಂಗಳೂರು ಜೈಲಿಗಾದರೂ ಶಿಫ್ಟ್ ಮಾಡಬೇಕಿದೆ. 

ಹಾಗಿದ್ರೆ ಅಷ್ಟೊಂದು ಬೆನ್ನು ನೋವಿನಿಂದ ಬಳಲುತ್ತಿದ್ದರೂ ದರ್ಶನ್ ಬಳ್ಳಾರಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆಯಲು ಏಕೆ ಒಪ್ಪುತ್ತಿಲ್ಲ? ಬಳ್ಳಾರಿ ಜೈಲಿನಲ್ಲಿ ವ್ಯವಸ್ಥೆ ಸರಿ ಇಲ್ಲ ಅನ್ನೋ ಕಾರಣಕ್ಕೆ ದರ್ಶನ್ ಟ್ರೀಟ್ಮೆಂಟ್ ಪಡೆಯಲು ಒಪ್ಪುತ್ತಿಲ್ಲವಾ ಅಥವಾ ಬೇರೆ ಇನ್ನೇನಾದ್ರು ಕಾರಣಗಳಿವೆಯಾ? ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿದೆ. ಆದರೂ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ಒಪ್ಪುತ್ತಿಲ್ಲ. ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ಒಪ್ಪದೇ ಇರೋದಕ್ಕೆ ಕೆಲವೊಂದಿಷ್ಟು ಕಾರಣಗಳಿವೆ. ಈ ಕಾರಣಕ್ಕಾಗಿಯೇ ದರ್ಶನ್ ಪರ ವಕೀಲರು ಈಗ ಹೈಕೋರ್ಟ್ ಮೊರೆ ಹೋಗಿದ್ದಾರೆ. ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಬೇಕಿದೆ ಹೀಗಾಗಿ ಚಿಕಿತ್ಸೆ ಪಡೆಯಲು ಜಾಮೀನು ನೋಡಬೇಕೆಂದು ದರ್ಶನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. 

ಈ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇದೇ ತಿಂಗಳ 22ರಂದು ನಡೆಸಲಿದೆ. ದರ್ಶನ್ ಪರ ವಕೀಲರು ಜಾಮೀನು ಕುರಿತಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದೇ 22ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಇಲ್ಲಿ ಜಾಮೀನು ಸಿಗಬಹುದು ಎಂಬ ಆಶೆಯದಲ್ಲಿ ದರ್ಶನ್ ಇದ್ದಾರೆ. ಹಾಗಿದ್ರೆ ಹೈಕೋರ್ಟ್ ಮೊರೆ ಹೋಗಿರುವ ದರ್ಶನ್ ಪರ ವಕೀಲರು ಪ್ರಮುಖವಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದೇನು. ದರ್ಶನ್ ಬೇಲ್ ವಿಚಾರವಾಗಿ ಹೈಕೋರ್ಟ್ಗೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಹೈಕೋರ್ಟ್ ಪೀಠ ಇದೇ ತಿಂಗಳು 22ರಂದು ಅರ್ಜಿ ವಿಚಾರಣೆ ನಡೆಸಲಿದೆ. ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರಿಂದ ದರ್ಶನ್ಗೆ ಒಂದಿಷ್ಟು ಖುಷಿಯಾಗಿದೆ ಎಂದು ಹೇಳಬಹುದು. ಯಾಕೆಂದ್ರೆ ಬೇಲ್ ಸಿಗದೇ ಇದ್ದರೂ ಚಿಕಿತ್ಸೆಗೆಂದು ಬೆಂಗಳೂರಿನ ಜೈಲಿಗಾದರೂ ಶಿಫ್ಟ್ ಸಾಧ್ಯತೆನಾದ್ರು ಇರುತ್ತೆ ಎಂದು ದರ್ಶನ್ ಅಂದುಕೊಂಡಿದ್ದಾರೆ. ಆದ್ರೆ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.