May 21, 2023, 3:26 PM IST
ಈಗ ಮಾಸ್ ಸಿನಿಮಾಗಳ ಟ್ರೆಂಡ್. ಆದ್ರೆ ಈ ಟ್ರೆಂಗ್ಗೆ ಕೌಂಟರ್ ಕೊಟ್ಟು ರೈತರ ಸ್ಟೋರಿಯನ್ನ ಮನ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಸ್ಯಾಂಡಲ್ವುಡ್ನ ಶ್ರೀಮಂತ ತಂಡ. ಇದೇ ಶುಕ್ರವಾರ ಕನ್ನಡದಲ್ಲಿ ಶ್ರೀಮಂತ ಸಿನಿಮಾ ಬಿಡುಗಡೆ ಆಗಿದೆ. ಬಾಲಿವುಡ್ ನಟ ಸೋನು ಸೂದ್ ಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕೆ ಹೆಸರುವಾಸಿ. ಇದೇ ಸೋನು ಸೂದ್ ಶ್ರೀಮಂತಾ ಸಿನಿಮಾದಲ್ಲಿ ರೈತನ ಪಾತ್ರದ ಮೂಲಕ ಮತ್ತೆ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿದ್ದಾರೆ. ಹಾಸನ ರಮೇಶ್ ನಿರ್ದೇಶನದ 'ಶ್ರೀಮಂತ' ಸಿನಿಮಾ ರೈತರ ಜೀವನದ ಮೇಲೆ ಬೆಳಕು ಚೆಲ್ಲುತ್ತೆ. ಕೃಷಿ ಕ್ಷೇತ್ರದ ಮೇಲೆ ತಂತ್ರಜ್ಞಾನದ ಪ್ರಭಾವದ ಕಥೆ ಈ ಸಿನಿಮಾದಲ್ಲಿದೆ. ಶ್ರೀಮಂತಾ ಸಿನಿಮಾದಲ್ಲಿ ವೈಷ್ಣವಿ ಚಂದ್ರನ್, ವೈಷ್ಣವಿ ಪಟವರ್ಧನ್, ಕ್ರಾಂತಿ, ಕಲ್ಯಾಣಿ, ಚರಣ್‌ರಾಜ್, ರಮೇಶ್ ಭಟ್, ಸಾಧು ಕೋಕಿಲ, ಕುರಿ ರಂಗ, ಬ್ಯಾಂಕ್ ಮಂಜಣ್ಣ, ರಾಜು ತಾಳಿಕೋಟೆ, ರವಿಶಂಕರ್ ಗೌಡ ಸೇರಿದಂತೆ ಅನೇಕರು ನಟಿಸಿದ್ದಾರೆ.