Nov 17, 2022, 1:32 PM IST
ಕನ್ನಡ ಚಲನಚಿತ್ರ ಪೋಷಕರ ಸಂಘದಲ್ಲಿ ಗಲಾಟೆ ದೊಡ್ಡದಾಗಿದೆ. ಹಿರಿಯ ನಟರು ಸಂಘದ ಹಣವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಹಾಗೂ ಮಹಿಳಾ ಕಲಾವಿದರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸುದ್ದಿಗೋಷ್ಠಿ ನಡೆಸುವ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿಸುವುದಾಗಿ ನಟಿಯರು ಹೇಳಿದ್ದಾರೆ. ಅವಾಚ್ಯ ಶಬ್ದಗಳಿಂದ ಅವಮಾನಿಸಿ ನಿಂದುತ್ತಿದ್ದಾರೆ ಜೊತೆಗೆ ಮಹಿಳಾ ಸದಸ್ಯರ ಮೊಬೈಲ್ಗೆ ಅಶ್ಲೀಲ ವಿಡಿಯೋವನ್ನು ಕಳುಹಿಸಿ ದೌರ್ಜನ್ಯ ಏಸಗುತ್ತಿದ್ದಾರೆ ಎಂದು ನಟಿ ಶ್ರೀಮತಿ ರಾಣಿ ಮಾತನಾಡಿದ್ದಾರೆ.
ಹೆಚ್ಚಿನ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment