Dec 27, 2024, 11:47 AM IST
2024ರ ಮೊದಲಾರ್ಧದಲ್ಲಿ ಸ್ಯಾಂಡಲ್ವುಡ್ನಲ್ಲಿ ಒಂದೇ ಒಂದು ಬಿಗ್ ಸ್ಟಾರ್ ಸಿನಿಮಾ ಬಂದಿರಲಿಲ್ಲ. ನೂರಕ್ಕೂ ಅಧಿಕ ಸಿನಿಮಾ ರಿಲೀಸ್ ಆದ್ರೂ ಒಂದು ಚಿತ್ರವೂ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿರಲಿಲ್ಲ. ಅಲ್ಲಿಗೆ ಈ ವರ್ಷ ಕನ್ನಡ ಚಿತ್ರರಂಗದ ಬಿಜಿನೆಸ್ ಗತಿ ಏನು ಅಂತ ಎಲ್ಲರೂ ಚಿಂತಿತರಾಗಿದ್ರು. ಆದ್ರೆ ಅದೃಷ್ಟವಶಾತ್ ಸ್ಯಾಂಡಲ್ವುಡ್ಗೆ ಸೆಕೆಂಡ್ ಹಾಫ್ ಕೈ ಹಿಡಿದಿದೆ. ಬಾಕ್ಸಾಫೀಸ್ನಲ್ಲಿ ಭರ್ಜರಿ ಬೆಳೆ ಬಂದಿದೆ.
ಕನ್ನಡ ಚಿತ್ರರಂಗದ ಪಾಲಿಗೆ ಈ ವರ್ಷದ ಮೊದಲಾರ್ಧ ಸಿಕ್ಕಾಪಟ್ಟೆ ಡಲ್ ಆಗಿತ್ತು. ಕಳೆದ ವರ್ಷಾಂತ್ಯಕ್ಕೆ ಬಂದ ಕಾಟೇರ ಸಿನಿಮಾ ಜನವರಿ, ಫೆಬ್ರುವರಿವರೆಗೂ ರೂಲ್ ಮಾಡಿತ್ತು. ಆದ್ರೆ ಅ 2024ರಲ್ಲಿ ಜನವರಿಯಿಂದ ಅಗಸ್ಟ್ ವರೆಗೂ ತೆರೆಗೆ ಬಂದ ಒಂದು ಚಿತ್ರವೂ ಬಾಕ್ಸ್ ಆಫೀಸ್ನಲ್ಲಿ ಸಕ್ಸಸ್ ಕಾಣಲಿಲ್ಲ. ನೂರಕ್ಕೂ ಅಧಿಕ ಸಿನಿಮಾಗಳು ಫ್ಲಾಪ್ ಹಣೆಪಟ್ಟಿ ಪಡೆದವು, ಚಿತ್ರಮಂದಿರಗಳು ಖಾಲಿ ಹೊಡೆದವು.
ಹೀಗಾದ್ರೆ ನಮ್ಮ ಇಂಡಸ್ಟ್ರಿಯ ಬಿಜಿನೆಸ್ ಗತಿಯೇನು ಅಂತ ಚಿತ್ರಕರ್ಮಿಗಳು ಟೆನ್ಶನ್ ಆಗಿದ್ರು. ಹೀಗೆ ಟೆನ್ಶನ್ನಲ್ಲಿದ್ದವರನ್ನ ಕೊಂಚ ರಿಲ್ಯಾಕ್ಸ್ ಮಾಡಿದ ಸಿನಿಮಾ ಅಂದ್ರೆ ದುನಿಯಾ ವಿಜಯ್ ನಟನೆ ನಿರ್ದೇಶನದ ಭೀಮ ಸಿನಿಮಾ.
ಆಗಸ್ಟ್ 9ರಂದು ತೆರೆಗೆ ಬಂದ ಈ ಸಿನಿಮಾ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಮರಳಿ ಕರೆತಂತು. ಹಿಟ್ ಲಿಸ್ಟ್ ಸೇರಿದ ಭೀಮ 20ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ವರ್ಷದ ಮೊದಲ ಹಿಟ್ ಅನ್ನಿಸಿಕೊಳ್ತು.
ಇನ್ನೂ ಭೀಮ ತೆರೆಕಂಡ ಮರುವಾರವೇ ರಿಲೀಸ್ ಆದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣ ಪ್ರಣಯ ಸಖಿ ಮೂವಿ ಕೂಡ ಕಮಾಲ್ ಮಾಡ್ತು. ಮ್ಯೂಸಿಕಲ್ ಹಿಟ್ ಅನ್ನಿಸಿಕೊಂಡ ಈ ಸಿನಿಮಾ ಶತದಿನೋತ್ಸವ ಆಚರಿಸ್ತು.
ಅಕ್ಟೋಬರ್ 31ಕ್ಕೆ ತೆರೆಗೆ ಬಂದ ಶ್ರೀಮುರಳಿ ನಟನೆಯ ಬಘೀರ ಕೂಡ ಸ್ಮಾಶ್ ಹಿಟ್ ಅನ್ನಿಸಿಕೊಳ್ತು. ಹೊಂಬಾಳೆ ಫಿಲಂಸ್ ನಿರ್ಮಿಸಿದ ಈ ಌಕ್ಚನ್ ವೆಂಚರ್ ನಿರ್ಮಾಪಕರಿಗೆ ಒಳ್ಳೆ ಲಾಭವನ್ನ ಮಾಡಿಕೊಟ್ತು.
ಇನ್ನೂ ಕಳೆದ ತಿಂಗಳು ರಿಲೀಸ್ ಆದ ಶಿವಣ್ಣನ ಭೈರತಿ ರಣಗಲ್ ಕೂಡ ಗೆಲುವಿನ ನಗೆ ಬೀರಿತು. ಮುಫ್ತಿ ಸಿನಿಮಾದ ಈ ಪ್ರೀಕ್ವೆಲ್ ಭರ್ಜರಿ ಗಳಿಕೆ ಮಾಡಿ, ನಿರ್ಮಾಪಕರ, ವಿತರಕರ ಮೊಗದಲ್ಲಿ ನಗು ತಂತು.
ಇನ್ನೂ ಕಳೆದ ವಾರವಷ್ಟೇ ರಿಲೀಸ್ ಆಗಿರೋ ರಿಯಲ್ ಸ್ಟಾರ್ ಉಪೇಂದ್ರ ನಟನೆ ನಿರ್ದೇಶನದ UI ಕೂಡ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡ್ತಾ ಇದೆ.
ಇದೀಗ ಈ ವಾರ ರಿಲೀಸ್ ಆಗಿರೋ ಮ್ಯಾಕ್ಸ್ ಕೂಡ ಯಶಸ್ವಿಯಾಗೋ ಸೂಚನೆ ನೀಡಿದೆ. ವರ್ಷಾಂತ್ಯಕ್ಕೆ ಗೆಲುವಿನ ಖುಷಿ ತಂದಿದೆ. ಅಲ್ಲಿಗೆ ಸ್ಯಾಂಡಲ್ವುಡ್ ಪಾಲಿಗೆ ಸೆಕೆಂಡ್ ಹಾಫ್ ಕೈ ಹಿಡಿದಿದೆ. ಬಾಕ್ಸಾಫೀಸ್ನಲ್ಲಿ ಬಂದಿರೋ ಬೆಳೆ ಫಿಲಂ ಮೇಕರ್ಸ್ ಮೊಗದಲ್ಲಿ ನಗು ತಂದಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...