ಉರ್ಫಿ ಜಾವೆದ್‌ಗೆ ಇದೇನಾಯ್ತು? : ಇದೇ ಮೊದಲ ಬಾರಿಗೆ ಮೈತುಂಬ ಬಟ್ಟೆ ಹಾಕಿದ ನಟಿ ..!
Jun 12, 2023, 12:38 PM IST
ನಟಿ ಉರ್ಫಿ ಜಾವೆದ್ ಇದೇ ಮೊದಲ ಬಾರಿಗೆ ಮೈತುಂಬ ಬಟ್ಟೆ ಹಾಕಿಕೊಂಡಿದ್ದಾರೆ. ಅವರು ಈ ಬಾರಿ ಏಲಿಯನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ನಲ್ಲಿ ಉರ್ಫಿ ಜಾವೇದ್ ಅವರ ಕಣ್ಣು ಹಾಗೂ ಬಾಯಿಯನ್ನು ಬಿಟ್ಟು ಬೇರೇನೂ ಕಾಣಿಸುತ್ತಿರಲಿಲ್ಲ. ಉರ್ಫಿ ಜಾವೇದ್ ಅವತಾರ ನೋಡಿದ ನೆಟ್ಟಿಗರು ನೀವು ದೆವ್ವದಂತೆಯೇ ಕಾಣುತ್ತಿದ್ದೀರಿ ಎಂದಿದ್ದಾರೆ. ಇನ್ನೂ ಕೆಲವರು ಏನಮ್ಮಾ ಇದು ಇವತ್ತೇನೂ ಕಾಣಿಸ್ತಿಲ್ವಲ್ಲಾ? ನಿನಗೆ ಬೇಸಿಗೆ ಬಿಸಿ ತಟ್ಟುತ್ತಿಲ್ವೇ ಎಂದು ಕೇಳಿದ್ದಾರೆ. ಇನ್ನೂ ಕೆಲವರು ನೀವು ಥೇಟ್ ಏಲಿಯನ್ ರೀತಿಯೇ ಕಾಣಿಸುತ್ತಿದ್ದೀರಿ ಎಂದಿದ್ದಾರೆ.