ದರ್ಶನ್‌ಗೆ ನವಗ್ರಹ ಕಂಟಕ! ಇದೇನಿದು..?: ನವಗ್ರಹ ವಾಹನ ಮಾಲೀಕರಿಗೆ ಶುರುವಾಗಿದೆ ನಡುಕ!

Jul 11, 2024, 4:30 PM IST

ಯಾರ ಜೀವನದಲ್ಲೆ ಆಗಲಿ ನವಗ್ರಹ ದೋಷವಿದೆ ಅಂದ್ರೆ ಅವರ ಬದುಕು  ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಆಗಿಬಿಡುತ್ತದೆ. ಅರಸನಂತೆ ಬದುಕಿದ್ದವರು ಆಳಾಗೊ ಸೂಚನೆಯಿದು. ಸದ್ಯ ದರ್ಶನ್ ಪರಿಸ್ಥಿತಿ ಇದು. ಊಟ ಸೇರ್ತಿಲ್ಲ ನಿದ್ದೆ ಬರ್ತಿಲ್ಲ. ತೂಕ ಇಳಿಕೆಯಾದ ಆತಂಕ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಡಿ ಗ್ಯಾಂಗ್ ಲಾಕ್ ಆಗಿದೆ. ಎ2 ಆರೋಪಿಯಾಗಿ ದರ್ಶನ್ ಕಂಬಿ ಎಣಿಸುತ್ತಿದ್ದಾರೆ ಇದೀಗ ದರ್ಶನ್ ಗೆ ನವಗ್ರಹ ಕಂಟಕ ಶುರುವಾಗಿದೆ. ನವಗ್ರಹ ಅತ್ಯಂತ ಪವರ್ಫುಲ್ ಎಂದು ಎಲ್ಲರೂ ನಂಬುತ್ತೇವೆ. ದರ್ಶನ್ ಹಿಟ್ ಸಿನಿಮಾ ನವಗ್ರಹ ಕೂಡ ಇರುವುದು ನಿಮಗೆ ಗೊತ್ತೆ ಇದೆ. ದರ್ಶನ್ ಮನಸ್ಸು ಮಾಡಿದ್ದರೆ ಅಷ್ಟು ಪವರ್ಫುಲ್ಲಾಗಿ ನವಗ್ರಹಗಳಲ್ಲೊಂದಾಗಿ ಗತ್ತು ಗಮ್ಮತ್ತಿನಿಂದ ಬದುಕಬಹುದಾಗಿತ್ತು. 

ಕೈಯ್ಯಾರೆ  ತನ್ನ ಬದುಕನ್ನಾ ತಾನೇ ಈಸ್ಥಿತಿಗೆ ತಂದುಕೊಂಡಂತಾಗಿದೆ. ದರ್ಶನ್ಗೆ ಇದೀಗ ನವಗ್ರಹ ಕಂಟಕ ಶುರುವಾಗಿದೆ. ಹಾಗಂತ ಇದು ಗ್ರಹ ದೋಷ ಅಂತ ಅಂದುಕೊಳ್ಳಬೇಡಿ. ದರ್ಶನ್ ಕೇಸ್ನಲ್ಲಿ ದರ್ಶನ್ಗೆ ಕಂಟಕವಾಗಿರೋದು ಆ 9 ವಾಹನಗಳು. ರೇಣುಕಾ ಕೊಲೆ ವೇಳೆ ಬಳಕೆಯಾದ 9 ವಾಹನಗಳನ್ನು ಪೊಲೀಸ್ ವಶಕ್ಕೆ ಪಡೆದಿದೆ. ಇತ್ತ ರೇಣುಕಾ ಕೊಲೆ ಕೇಸ್ನಲ್ಲಿ ಬಳಕೆಯಾದ ವಾಹನಗಳ ಕಥೆ ಬಗ್ಗೆ ರಿವೀಲ್ ಆಗಿದೆ. ಡೆವಿಲ್ ಗ್ಯಾಂಗ್ ಕೊಲೆಗೆ ಬಳಸಿಕೊಂಡ ಕಾರು, ಬೈಕ್ ವಾಹನಗಳನ್ನು ಪೊಲೀಸರು ಈಗಾಗಲೇ ಕಬ್ಜ ಮಾಡಿದ್ದಾರೆ. ಸದ್ಯ ಇವುಗಳ ಮಾಹಿತಿ ಕೇಳಿ ಪೊಲೀಸರು ಪತ್ರ ಬರೆದಿದ್ದಾರೆ. 

ಇದ್ರಲ್ಲೇನು ವಿಶೇಷ ಅಂದ್ರೆ ಈ ಪತ್ರದಿಂದ ವಾಹನಗಳ ಮೂಲ ಮಾಲೀಕರಿಗೆ ನಡುಕ ಶುರುವಾಗಿದೆ. ರೇಣುಕಾಸ್ವಾಮಿ ಕೇಸ್ಗೂ ತಮಗೂ ಸಂಬಂಧವಿಲ್ಲ ಎಂದು ಈ ಮಾಲಿಕರು ಹೇಳಿದರೂ ಡೋಂಟ್ ಕೇರ್ ಎನ್ನುವ ಪರಿಸ್ಥಿತಿ. ನಮ್ಮ ವಾಹನಗಳನ್ನು ಬೇರೆಯವರಿಗೆ ಬಳಸಲು ಕೊಡುವ ಮುಂಚೆ ಹತ್ತಾರು ಬಾರಿ ಯೋಚಿಸಬೇಕು. ಇಲ್ಲಾ ಅಂದ್ರೆ ನಮ್ಮ ವಾಹನಗಳನ್ನು ಹೀಗೆ ಪೊಲೀಸ್ ಠಾಣೆಯಲ್ಲಿ ಕೊಳೆಯುವ ಸ್ಥಿತಿ ನೋಡಬೇಕಾಗಿ ಬರುತ್ತದೆ.  ಅನ್ನೋದು ದರ್ಶನ್ ಕೊಲೆ ಕೇಸ್ನಿಂದ ಮಾಲೀಕರಿಗೆ ಜ್ನಾನೋದಯವಾಗಿದೆ. ದರ್ಶನ್ ಅಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ವೇಳೆ ಬಳಕೆಯಾದ 9 ವಾಹನಗಳನ್ನು ಪೊಲೀಸರು ಈವರೆಗೆ ವಶಕ್ಕೆ ಪಡೆದಿದ್ದಾರೆ.

ಸದ್ಯ ಜಪ್ತಿಯಾದ ಈ ವಾಹನಗಳ ಮಾಹಿತಿ ಕೇಳಿ ಆರ್ಟಿಓಗೆ ಪೊಲೀಸರು ಪತ್ರ ಬರೆದಿದ್ದಾರೆ. ವಾಹನಗಳ ಮೂಲ ಮಾಲೀಕರು ಯಾರು? ಯಾರ ಹೆಸರಲ್ಲಿ ವಾಹನ ಇದೆ ಅಂತ ಮಾಹಿತಿ ನೀಡುವಂತೆ ಕೋರಿದ್ದಾರೆ. ಇದು ದರ್ಶನ್ನ ನಂಭಿ ವಾಹನ ಕೊಟ್ಟಿದ್ದವರಿಗೆ ಹೊಸ ಟೆನ್ಷನ್ನ್ನು ಕ್ರಿಯೇಟ್ ಮಾಡಿದೆ. ದರ್ಶನ್ ಇನ್ನೂ ಯಾವಾಯಾವ ಹಳೇ ಕೇಸ್ಗಳೀಗೆ ಈ ವಾಹನಗಳು ಲಿಂಕ್ ಆಗಿವೆ ಅನ್ನೋದು ಹೊರಬೀಳಲಿದೆ. ಇಷ್ಟಕ್ಕೂ ಈ ಒಂಬತ್ತು ವಾಹನಗಳು ಯಾರವು..? ದರ್ಶನ್ ತನ್ನ ಕಾರುಗಳನ್ನು ಬಿಟ್ಟು ಬೇರೆಯವರ ವಾಹನಗಳನ್ನು ಕೊಲೆ ಕೇಸ್ನಲ್ಲಿ ಬಳಸಿದ್ದಾದರೂ ಯಾಕೆ..?ರೇಣುಕಾಸ್ವಾಮಿ ಕೊಲೆ ವೇಳೆ ಬೈಕ್, ಕಾರಿನಲ್ಲಿ ಆರೋಪಿಗಳು ಶೆಡ್ಗೆ ಬಂದಿದ್ದರು. ಈ ಎಲ್ಲಾ ವಾಹನಗಳನ್ನು ವಶಕ್ಕೆ ಪಡೆದಿದ್ದು ಆರೋಪಿಗಳು ಯಾವೆಲ್ಲ ಗಾಡಿಗಳಲ್ಲಿ ಓಡಾಡಿದ್ರು ಎಂಬುವುದರ ಬಗ್ಗೆ ಮಾಹಿತಿ ನೀಡಲಾಗಿದೆ. 

ಧನರಾಜ್ & ನಂದೀಶ್ ತಮ್ಮ ಹೆಸರಿನಲ್ಲಿರುವ ಸ್ವಂತ ಬೈಕ್ ಬಳಕೆ ಮಾಡಿದ್ರೆ ಉಳಿದ ಆರೋಪಿಗಳು ಬೇರೆಯವರ ಹೆಸರಲ್ಲಿದ್ದ ಬೈಕ್ ಬಳಸಿದ್ರು. ಹೀಗಾಗಿ ಮೂಲ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಬೈಕ್ ಕೊಡಲು ಕಾರಣವೇನು? ಆರೋಪಿಗೂ ನಿಮಗೂ ಏನು ಸಂಬಂಧ? ಯಾವ ಕಾರಣಕ್ಕೆ ಬೈಕ್ ಕೊಟ್ಟಿದ್ರಿ ಎಂದು ವಿಚಾರಣೆ ನಡೆಸಲಿದ್ದಾರೆ. ಒಟ್ಟಿನಲಗಲಿ ಇನ್ಮೇಲೆ ಯಾರಿಗಾದರೂ ನಿಮ್ಮ ವಾಹನ ಕೊಡಬೇಕಾದರೆ ಹುಷಾರ್ ಅನ್ನೋ ಎಚ್ಚರಿಕೆಯನ್ನು ಈ ಘಟನೆ ಕೊಟ್ಟಿದೆ. ದರ್ಶನ್ಗೆ ನವಗ್ರಹ ವಾಹನಗಳು ಹೇಗೆ ಇನ್ನಷ್ಟು ಸಂಕಷ್ಟ ತಂದೊಡ್ಡುತ್ತವೆಯೋ ಕಾದು ನೋಡಬೇಕು.