ಫಿಲ್ಮ್ ಇಂಡಸ್ಟ್ರೀಯನ್ನೇ ರೂಲ್ ಮಾಡ್ತಿದೆ ಪುಷ್ಪ 2; ಹಳೇ ದಾಖಲೆಗಳೆಲ್ಲ ಧೂಳೀಪಟ!

Dec 9, 2024, 5:29 PM IST

ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರೀಯನ್ನೇ  ಸದ್ಯ ಪುಷ್ಪ 2 ರೂಲ್ ಮಾಡ್ತಿದೆ. ಹಳೆ ದಾಖಲೆಗಳು ಬ್ರೇಕ್ ಆಗ್ತಿವೆ. ಹೊಸ ರೆಕಾರ್ಡ್ಗಳು ಕ್ರಿಯೇಟ್ ಆಗ್ತಿವೆ. ಐಕಾನ್ ಸ್ಟಾರ್ ಇಷ್ಟು ದೊಡ್ಡ ಗೆಲುವನ್ನ ಕಾಣೋದಕ್ಕೆ ಮೆಗಾ ಫ್ಯಾಮಿಲಿಯ ಪವರ್ ಕೊಡುಗೆ ಇದೆ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಅದಕ್ಕೆ ಸಾಕ್ಷಿಯನ್ನುವಂತೆ ಇತ್ತು ಪುಷ್ಪ ಸಕ್ಸಸ್ ಇವೆಂಟ್ನಲ್ಲಿ ಅಲ್ಲು ಅರ್ಜುನ್ ಹೇಳಿದ ಆ ಥ್ಯಾಂಕ್ಸ್.

ಯೆಸ್  ಪುಷ್ಪ2 ಸಿನಿಮಾ ಮುನ್ನುಗ್ಗಿ ಸಾಗ್ತಿದೆ. ಪುಷ್ಪ ಪ್ಲವರ್ ಅಲ್ಲ ವೈಲ್ಡ್ ಫೈಯರ್ ಅನ್ನೋದು ಮತ್ತೆ  ಪ್ರೂವ್ ಆಗಿದೆ. ಪುಷ್ಪ ಕಲೆಕ್ಷನ್ ವೇಗದೆದ್ರು ಇಂಡಿಯನ್ ಸಿನಿಇಂಡಸ್ಟ್ರಿಯ ಹಳೆಯ ದಾಖಲೆಗಳೆಲ್ಲಾ ಪೀಸ್ ಪೀಸ್ ಆಗಿವೆ. ಬಾಕ್ಸ್ ಆಫೀಸ್ ನಲ್ಲಿ ಪುಷ್ಪರಾಜ್ ಅಕ್ಷರಶಃ ಹಣದ ಹೊಳೆಯನ್ನೇ ಹರಿಸಿದ್ದಾನೆ.

4 ದಿನದ ಅಂತ್ಯಕ್ಕೆ ಪುಷ್ಪ-2 ಚಿತ್ರವು ಬರೋಬ್ಬರಿ 700 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದ್ದು, ಇದು ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲೇ ಅತಿದೊಡ್ಡ ದಾಖಲೆ. ಎಲ್ಲಾ ಸ್ಟಾರ್ಗಳನ್ನೂ ಮೀರಿಸಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಂ.1 ಪಟ್ಟಕ್ಕೇರಿದ್ದಾರೆ.

ಪುಷ್ಪ-2 ಸಿನಿಮಾದ ಈ ಅಮೋಘ ಗೆಲುವಿನ ಹಿಂದೆ ಅನೇಕ ಕಾರಣ ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸಿಕ್ಕ ಅವಕಾಶ ಕೂಡ ಪುಷ್ಪನ ಗಳಿಕೆ ಹೆಚ್ಚಲಿಕ್ಕೆ ಒಂದು ರೀಸನ್ ಅಂದ್ರೆ ತಪ್ಪಾಗಲ್ಲ. ಆದ್ರೆ ಆಂಧ್ರ, ಮತ್ತು ತೆಲಂಗಾಣದಲ್ಲಿ ಟಿಕೆಟ್ ಬೆಲೆ ಹೆಚ್ಚಳಕ್ಕೆ ಸರ್ಕಾರವೇ ಅನುಮತಿ ಕೊಡಬೇಕು. ಈ ನಿಟ್ಟಿನಲ್ಲಿ ಅಂಥಾ ಅನುಮತಿ ಕೊಟ್ಟು ಸಹಕರಿಸಿದ ಸರ್ಕಾರಕ್ಕೆ ಅಲ್ಲು ಅರ್ಜುನ್ ಸಕ್ಸಸ್ ಮೀಟ್‌ನಲ್ಲಿ ಧನ್ಯವಾದ ಹೇಳಿದ್ದಾರೆ.

ಅದ್ರಲ್ಲೂ ವಿಶೇಷವಾಗಿ ಆಂಧ್ರ ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಧನ್ಯವಾದ ಹೇಳಿದ್ದಾರೆ. ಪವನ್ ಕಲ್ಯಾಣ್ , ಅಲ್ಲು ಅರ್ಜುನ್ಗೆ ಮಾವ. ಆದ್ರೆ ಈ ಮಾವ ಅಳಿಯನ ನಡುವೆ ಕಳೆದ ಹಲವು ದಿನಗಳಿಂದ ವಾರ್ ನಡೀತಾ ಇತ್ತು ಅನ್ನೋದು ಗೊತ್ತೇ ಇದೆ.

ಖುದ್ದು ಪವನ್ ಕಲ್ಯಾಣ್ಗೂ ಪುಷ್ಪ ಸಿನಿಮಾ ಬಗ್ಗೆ ಅಸಹನೆ ಇತ್ತು ಅನ್ನೋದು ಕೂಡ ರಿವೀಲ್ ಆಗಿತ್ತು. ಕೆಲ ತಿಂಗಳ ಹಿಂದೆ ಕರ್ನಾಟಕ ಅರಣ್ಯ ಭವನಕ್ಕೆ ಬಂದಿದ್ದ ಪವನ್ , ಪುಷ್ಪ 1 ಬಗ್ಗೆ  ಒಂದು ಮಾತು ಹೇಳಿದ್ರು.. ಡೈರೆಕ್ಟ್ ಆಗಿ ಅಲ್ಲದೇ ಹೋದ್ರೂ ಇಂಡೈರೆಕ್ಟ್ ಆಗಿ ಅಲ್ಲಿ ಪವನ್ರ ಟಾರ್ಗೆಟ್ ಆಗಿದದ್ದು ಅಲ್ಲು ಅರ್ಜುನ್ ಅನ್ನೋದು ಸ್ಪಷ್ಟವಾಗಿತ್ತು.

ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ಮಧ್ಯೆ ಭಿನ್ನಾಭಿಪ್ರಾಯ ಮೂಡಿ ಸಾಕಷ್ಟು ಟೈಮ್ ಆಗಿದೆ. ಅದ್ರಲ್ಲೂ ಆಂಧ್ರ ಚುನವಣೆ ಟೈಮ್ನಲ್ಲಿ ಪವನ್ ಕಲ್ಯಾಣ್ ಅವರ ಎದುರಾಳಿ ಪಕ್ಷದ ಅಭ್ಯರ್ಥಿ ಪರವಾಗಿ ಅಲ್ಲು ಅರ್ಜುನ್ ಪ್ರಚಾರ ಮಾಡಿದ್ರು. ಅದಾದ ಬಳಿಕವೂ ಇಬ್ಬರೂ ಪರಸ್ಪರ ಪರೋಕ್ಷವಾಗಿ ವಾಗ್ದಾಳಿಗಳನ್ನು ಮಾಡಿಕೊಂಡಿದ್ರು. ಇವರಿಬ್ಬರ ಮಧ್ಯೆ ನಿರ್ಮಾಣವಾಗಿದ್ದ ಕಂದಕ ದಿನ ದಿನಕ್ಕೂ ದೊಡ್ಡದಾಗ್ತಲೇ ಇತ್ತು. ಬಾಕಿ ಮೆಗಾ ಫ್ಯಾಮಿಲಿ ಜೊತೆ ಒಳ್ಳೆ ರಿಲೇಷನ್ ಇದ್ರೂ ಪವನ್ ಕಲ್ಯಾಣ್ ಜೊತೆ ಮಾತ್ರ ಅಲ್ಲು ಅರ್ಜುನ್ ಮುನಿಸು ಮರೆಯಾಗಿರಲಿಲ್ಲ. ಆದ್ರೀಗ ಇಬ್ರೂ ವೈಮನಸ್ಸನ್ನ ಮರೆಯೋ ಪ್ರಯತ್ನ ಮಾಡಿದ್ದಾರೆ. 

ಆಂಧ್ರದಲ್ಲಿ ಇರೋದು ಚಂದ್ರುಬಾಬು ನಾಯ್ಡು ಸರ್ಕಾರ. ನಾಯ್ಡು ಜೊತೆಗೆ ಮೈತ್ರಿ ಮಾಡ್ಕೊಂಡಿರೋ ಪವನ್ ಕಲ್ಯಾಣ್ ಆಂಧ್ರ ಡಿಸಿಎಂ. ಇಲ್ಲಿ ಯಾವುದೇ ಸಿನಿಮಾ ತನ್ನ ಟಿಕೆಟ್ ರೇಟ್ ಜಾಸ್ತಿ ಮಾಡೋಕು ಸರ್ಕಾರದ ಅನುಮತಿ ಬೇಕು.  ಪವನ್ ಕಲ್ಯಾಣ್ ಒಂದೇ ಒಂದು ಮಾತು ಇಲ್ಲಾ ಅಂದಿದ್ರು, ಪುಷ್ಪ 2 ಸಿನಿಮಾ ಟಿಕೆಟ್ ರೇಟ್ನ ಅಲ್ಲಿ ಜಾಸ್ತಿ ಮಾಡೋಕೆ ಆಗ್ತಿರಲಿಲ್ಲ. ಆದ್ರೆ, ಪವನ್ ಕಲ್ಯಾಣ್ ಹಾಗೆ ಮಾಡ್ಲಿಲ್ಲ. ಅಳಿಮಯ್ಯ ಅಲ್ಲು ಅರ್ಜುನ್ ಜೊತೆಗೆ ಏನೇ ಮುನಿಸು ಇದ್ರೂ ಅದನೆಲ್ಲಾ ಮರೆತು ನಡೆದುಕೊಂಡಿದ್ದಾರೆ. 

ದೇಶಾದ್ಯಂತ ಸಿನಿಮಾಗೆ ಸಖತ್ ಆಗಿರೋ ರೆಸ್ಪಾನ್ಸ್ ಸಿಗ್ತಾ ಇರೋದ್ರಿಂದ ಶನಿವಾರ ಪುಷ್ಪ 2 ಸಿನಿಮಾ ತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು. ಈ ವೇಳೆ ಸಿನಿಮಾಗೆ ಸಹಕರಿಸಿದ ಎಲ್ಲರಿಗೂ ಅಲ್ಲು ಅರ್ಜುನ್ ಧನ್ಯವಾದ ಅರ್ಪಿಸ್ತಾ ಹೋದ್ರು. ಇದೇ ವೇಳೆ ಸಿನಿಮಾ ಟಿಕೆಟ್ ಜಾಸ್ತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಪವನ್ ಕಲ್ಯಾಣ್ ಅವರಿಗೂ ಥ್ಯಾಂಕ್ಸ್ ಹೇಳೋದನ್ನ ಅಲ್ಲು ಅರ್ಜುನ್ ಮರೆತಿಲ್ಲ. 

ಇದೊಂದು ಥ್ಯಾಂಕ್ಸ್‌ನಿಂದ ಅಳಿಯ ಮಾವನ ನಡುವೆ ಸೃಷ್ಟಿಯಾಗಿದ್ದ ಮುನಿಸು, ಮನಸ್ತಾಪ ಎಲ್ಲವೂ ಮಾಯವಾಗಿರೋ ಸೂಚನೆಗಳು ಸಿಕ್ಕಿವೆ. ಒಟ್ಟಾರೆ ಪುಷ್ಪ-2 ಗೆಲುವಿನಲ್ಲಿ ಮೆಗಾ ಫ್ಯಾಮಿಲಿಯ ಪವರ್ ಕೊಡುಗೆಯೂ ಇದೆ ಅನ್ನೋದನ್ನ ಮರೆಯೋ ಹಾಗಿಲ್ಲ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..