Jul 6, 2023, 3:44 PM IST
ಒಬ್ಬ ಬಸ್ ಕಂಡೆಕ್ಟರ್ ಆಗಿದ್ದ ಹುಡುಗ ಬಣ್ಣದ ಜಗತ್ತಿಲ್ಲಿ ಸೂಪರ್ ಸ್ಟಾರ್ ಆಗಬಹುದು ಅಂತ ತೋರಿಸಿಕೊಟ್ಟವರು ಸೂಪರ್ ಸ್ಟಾರ್ ರಜನಿಕಾಂತ್. ಇದೇ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಒಂದು ಮಹತ್ ಕಾರ್ಯ ಮಾಡಿದ್ದಾರೆ. ಕಾರು ತೊಳೆಯುತ್ತಿದ್ದ ಹುಡುಗನೊಬ್ಬನನ್ನ ಚಿತ್ರರಂಗಕ್ಕೆ ಕರೆತಂದು ಸ್ಟಾರ್ ಮಾಡಿದ್ದಾರೆ. ಆ ಸ್ಟಾರ್ ಯಾರು ಗೊತ್ತಾ..? ಇಂದು ಚಂದ್ರಮುಖಿ 2 ಸಿನಿಮಾದಿಂದ ಕಾಲಿವುಡ್‌ನಲ್ಲಿ ಹೊಸ ಸೆನ್ಸೇಷನ್ ಹುಟ್ಟುಹಾಕ್ತಿದ್ದಾರಲ್ಲ ರಾಘವ್ ಲಾರೆನ್ಸ್ (Raghava Lawrence) ಅವರೇ ರಜನಿಯಾ ಕನಸು ನನಸು ಮಾಡಿ ಸ್ಟಾರ್ ಆದ ಹೀರೋ ಆಗಿದ್ದಾರೆ. ರಾಘವ ಲಾರೆನ್ಸ್ ಜನಪ್ರಿಯ ನೃತ್ಯ ನಿರ್ದೇಶಕ, ನಟ ನಿರ್ದೇಶಕ. ನೂರಾರು ತೆಲುಗು, ತಮಿಳು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿರೋ ಪ್ರಭಾಸ್, ನಾಗಾರ್ಜುನ್, ಅಕ್ಷಯ್ ಕುಮಾರ್ ಅಂತಹ ಸ್ಟಾರ್ ನಟರಿಗೆ ಸಿನಿಮಾ ನಿರ್ದೇಶಿಸಿ ಸೂಪರ್ ಹಿಟ್ಗಳನ್ನು ಕೊಟ್ಟಿದ್ದಾರೆ. ಇಂದು ಯಶಸ್ಸಿನ ಉತ್ತುಂಗದಲ್ಲಿರೋ ರಾಘವ್ ಲಾರೆನ್ಸ್ ಸಿನಿಮಾ ವೃತ್ತಿ ಆರಂಭಿಸೋ ಮೊದಲು ಫೈಟ್ ಮಾಸ್ಟರ್ ಸೂಪರ್ ಸುಬ್ರಹ್ಮಣ್ಯಂ(Subrahmanyam) ಬಳಿ ಕಾರು(Car) ತೊಳಿಯುವ ಕೆಲಸ ಮಾಡುತ್ತಿದ್ದರಂತೆ. ಒಮ್ಮೆ ಸಿನಿಮಾ ಸೆಟ್ನಲ್ಲಿ ರಾಘವ ಅವರು ಡ್ಯಾನ್ಸ್ ನೋಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ರಾಘವ್ ಡ್ಯಾನ್ಸ್ ಇಷ್ಟವಾಗಿ ಅವರನ್ನು ಡ್ಯಾನ್ಸ್ ಯೂನಿಯನ್‌ಗೆ ಸೇರಿಸಿದ್ರು.ಈಗೋಂದು ಸಿನಿಮಾಗಳಲ್ಲೂ ನಟಿಸುತ್ತಾ ಇಂದು ಸ್ಟಾರ್ ನಟ ಆಗಿದ್ದಾರೆ.
ಇದನ್ನೂ ವೀಕ್ಷಿಸಿ: ಪ್ರಭಾಸ್, ಮಹೇಶ್ ಬಾಬು ದಾಖಲೆ ದೂಳಿಪಟ ಮಾಡಿದ ಪವನ್ ಕಲ್ಯಾಣ್: ಅದೇನು ಗೊತ್ತಾ?