ನಿಮಗಾಗಿ ಸಿಗುತ್ತಾರೆ ಸ್ಯಾಂಡಲ್‌ವುಡ್‌ 'ಸ್ವೀಟಿ': ಅಭಿಮಾನಿಗಳ ಭೇಟಿಗೆ ರಾಧಿಕಾ ಡೇಟ್, ಟೈಂ ಫಿಕ್ಸ್..!

Nov 10, 2023, 9:51 AM IST

ಸ್ವೀಟಿ ರಾಧಿಕಾರನ್ನ ಭೇಟಿ ಆಗ್ಬೇಕು. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋ ಆಸೆ ಅದೆಷ್ಟೋ ಗಂಡ್ ಹೈಕ್ಳ ಮೊದಲ ಆಸೆ. ಅದಕ್ಕಾಗಿ ಈಗ ಒಂದು ಅವಕಾಶ ಸಿಕ್ಕಿದೆ. ಸ್ಯಾಂಡಲ್‌ವುಡ್ ಜೂಲಿಯೆಟ್ ರಾಧಿಕಾ ಕುಮಾರಸ್ವಾಮಿ(Radhika Kumaraswamy) 10 ವರ್ಷದ ಬಳಿಕ ಒಂದ್ ಗಟ್ಟಿ ನಿರ್ಧಾರ ಮಾಡಿದ್ದಾರೆ. ಈ ವರ್ಷ ತನ್ನ ಡೈ ಹಾರ್ಡ್ ಫ್ಯಾನ್ಸ್‌ನನ್ನ ಭೇಟಿ ಮಾಡ್ಲೇ ಬೇಕು ಅಂತ ಡೇಟ್, ಟೈಂ ಫಿಕ್ಸ್ ಮಾಡಿದ್ದಾರೆ. ರಾಧಿಕಾಕುಮಾರ ಸ್ವಾಮಿಗೆ ನವೆಂಬರ್ 12 ರಂದು ಹುಟ್ಟುಹಬ್ಬ(Birthday). ಈ ಬರ್ತ ಡೇಯನ್ನ ಒಂದು ದಿನ ಮೊದಲೇ ಫ್ಯಾನ್ಸ್ ಜತೆ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಡಾಲಾರ್ಸ್ ಕಾಲೋನಿಯಲ್ಲಿರೋ ರಾಧಿಕಾ ನಿವಾಸದಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ರಾಧಿಕಾ ಅಭಿಮಾನಿಗಳನ್ನ(Fans) ಭೇಟಿ ಮಾಡೋದಾಗಿ ಹೇಳಿದ್ದಾರೆ. ಸ್ವೀಟಿ ರಾಧಿಕಾ ಹೋಮ್ ಬ್ಯಾನರ್ ಸಿನಿಮಾ ಬೈರಾದೇವಿ. ಶ್ರೀಜೈ ನಿರ್ದೇಶನದ ಈ ಸಿನಿಮಾದಲ್ಲಿ ರಾಧಿಕಾ ಅಘೋರಿ ತರ ಕಾಣಿಸಿಕೊಂಡು ಥ್ರಿಲ್ ಹುಟ್ಟಿಸಿದ್ರು. ಈಗ ಇದೇ ಸಿನಿಮಾದ ಟೀಸರ್ ರಾಧಿಕಾ ಹುಟ್ಟುಹಬ್ಬಕ್ಕೆ ರಿಲೀಸ್ ಆಗ್ತಿದೆ. ಒಟ್ನಲ್ಲಿ ಹಲವು ವರ್ಷಗಳ ನಂತರ ರಾಧಿಕಾ ತನ್ನ ಡೈ ಹಾರ್ಡ್ ಫ್ಯಾನ್ಸ್‌ ಭೇಟಿ ಮಾಡ್ತಿದ್ದಾರೆ. ಆ ದಿನ ರಾಧಿಕಾ ಮನೆ ಮುಂದೆ ಅಭಿಮಾನಿಗಳ ಜಾತ್ರೆಯಂತು ಗ್ಯಾರಂಟಿ.

ಇದನ್ನೂ ವೀಕ್ಷಿಸಿ:  ಮಹಾಮಳೆಗೆ ಜಲಾಹುತಿಯಾದ ಶಸ್ತ್ರಾಸ್ತ್ರಗಳು..! ಕೊಠಡಿಯಲ್ಲಿ ಸಂಗ್ರಹಿಸಿದ್ದ ಗನ್, ಬಂದೂಕು ನೀರುಪಾಲು