ಶಿವ-ಲೀಲಾ ರೋಮ್ಯಾನ್ಸ್‌ ಸೀನ್‌ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

Jan 2, 2023, 5:59 PM IST

ಕಾಂತಾರ ನೂರಾರು ಜನ ಸೇರಿ ಕೆಲಸ ಮಾಡಿದ ಸಿನಿಮಾ. ಒಂದು ವರ್ಷ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳದೆ ನನ್ನ ಜತೆಯಲ್ಲೇ ಅವರು ಇದ್ದರು ಎಂದು ರಿಷಬ್ ಶೆಟ್ಟಿ ತಿಳಿಸಿದರು‌. ಭಕ್ತಿಯಿಂದ ಕಲ್ಲಿಗೆ ಕೈ ಮುಗಿದ್ರು ಫಲ ಸಿಗುತ್ತೆ ಎನ್ನುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಶಿವ -ಲೀಲಾ ರೋಮ್ಯಾನ್ಸ್‌ ಸೀನ್‌ ನನ್ನ ಜೀವನದಲ್ಲಿ ನಡಿದಿರಲಿಲ್ಲ ಎಂದು ತಮಾಷೆಯಾಗಿ ಉತ್ತರವನ್ನು ನೀಡಿದರು. ಬೇರೆಯವರ ಜೀವನದಲ್ಲಿ ನಡಿದಿತ್ತು. ಆ ತರಹದ ಪಾತ್ರಗಳನ್ನು ತುಂಬಾ ನೋಡಿದ್ದೇನೆ. ಕಂಬಳದಲ್ಲಿ ಕೋಣ ಓಡಿಸುತ್ತಿದ್ದಂತವರು ಆಗಬಹುದು ಅವರ ಲವ್‌ ಸ್ಟೋರಿ ಕೇಳುವುದಾಗಿರಬಹುದು ಊರು ಅಂದಾಗ ಎಲ್ಲಾ ಕಥೆ ಎಲ್ಲರಿಗೂ ಗೊತ್ತಿರುತ್ತೆ. ಪರಿಚಯವಿದ್ದಾಗ ಅದಕ್ಕಾಗಿ ಆ ತರಹದ ಸನ್ನಿವೇಶವನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೇವೆ ಎಂದು ಹೇಳಿದರು.