ಪಾಸ್ ಇದ್ದವರಿಗೆ ಮಾತ್ರ ಪುನೀತ್ ರಾಜ್‌ಕುಮಾರ್ ನಮನಕ್ಕೆ ಎಂಟ್ರಿ!

Nov 16, 2021, 12:26 PM IST

ಕನ್ನಡ ಚಿತ್ರರಂಗದ ಮುತ್ತುರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ನಮನ ಸಲ್ಲಿಸಬೇಕು ಎಂದು ಕನ್ನಡ ಫಿಲಂ ಚೇಂಬರ್ ಕಾರ್ಯಕ್ರಮ ಹಮ್ಮಿಕೊಂಡಿದೆ.  ರಾಜಕೀಯ ಗಣ್ಯರು, ಬಾಲಿವುಡ್, ದಕ್ಷಿಣ ಭಾರತೀಯ ಕಲಾವಿದರು ಮತ್ತು ಸ್ಯಾಂಡಲ್‌ವುಡ್‌ ಗಣ್ಯರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಒಟ್ಟು 2 ಸಾವಿರ ಜನರು ಭಾಗಿಯಾಗಲಿದ್ದು, ಮೂರು ಗಂಟೆಗಳ ಕಾಲ ನಮನ ಕಾರ್ಯಕ್ರಮ ನಡೆಯಲಿದೆ. ಅಭಿಮಾನಿಗಳಿಗೆ ಇಲ್ಲಿ ಪ್ರವೇಶ ಇರುವುದಿಲ್ಲ. ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಇಂದು ಯಾವ ಶೂಟಿಂಗ್‌ ಕೂಡ ಇರುವುದಿಲ್ಲ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment