Dec 7, 2019, 4:03 PM IST
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಎದುರು ಕಿಚ್ಚಾ ಸುದೀಪ್ ಖದರ್ ಆಗಿ ಕಾಣಲು ಕಸರತ್ತು ಮಾಡುತ್ತಿರುವ ಬ್ಯಾಡ್ ಬಾಯ್ ಬಲ್ಲೀ ಸಿಂಗ್ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ಸೂಪರ್ ಸ್ಟಾರ್‌ಗೆ ನಮ್ಮ ಕನ್ನಡದ ಸೂಪರ್ ಸ್ಟಾರ್ ಎದುರಾಗುತ್ತಿರುವುದೇ ಕನ್ನಡಿಗರ ಹೆಮ್ಮೆ. ದುಬಾರಿ ಕಾರಿದ್ದರೂ ಸೈಕಲ್ ಏರಿ ಕೋಟಿಗೊಬ್ಬ-3 ಶೂಟಿಂಗ್‌ಗೆ ತೆರಳಿದ ಸುದೀಪ್ ಎಷ್ಟು ಫಿಟ್ನೆಸ್ ಫ್ರೀಕ್ ಎಂಬುವುದು ಎಲ್ಲರಿಗೂ ಗೊತ್ತು. ಅಷ್ಟೇ ಏಕೆ 'ಪೈಲ್ವಾನ್' ಚಿತ್ರಕ್ಕೆ ಕೆಜಿಗಟ್ಟಲೆ ತೂಕ ಇಳಿಸಿಕೊಂಡು ಡಿಫರೆಂಟ್ ಆಗಿ ಕಾಣಿಕೊಂಡಿದ್ದರು.