'ಭಜರಂಗಿ 2' ಚಿತ್ರದ ಬಗ್ಗೆ ಶಿವಣ್ಣನ ಎಕ್ಸ್‌ಕ್ಲೂಸಿವ್ ಮಾತುಗಳು!

Oct 24, 2021, 1:09 PM IST

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ  ಶಿವರಾಜಕುಮಾರ್ (Shivarajkumar) ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭಜರಂಗಿ 2' (Bhajarangi 2). ಈ ಚಿತ್ರದ ಟ್ರೇಲರ್ (Trailer) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಇದೇ ಅಕ್ಟೋಬರ್ 29 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಇದೀಗ 'ಭಜರಂಗಿ 2'  ಚಿತ್ರದ ಬಗ್ಗೆ ಸೆಂಚುರಿ ಸ್ಟಾರ್ ಶಿವಣ್ಣ, ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. 

ಭಜರಂಗಿ 2 ಭಕ್ತಿಪ್ರಧಾನ ಮಾಸ್‌ ಸಿನಿಮಾ: ಶಿವರಾಜ್‌ ಕುಮಾರ್‌

ಚಿತ್ರದ ಟ್ರೇಲರ್ ಮತ್ತು ತಮ್ಮ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡರಲ್ಲದೇ ಚಿತ್ರದಲ್ಲಿ ಬರುವ  ಭಿನ್ನ ವಿಭಿನ್ನ ಮ್ಯಾನರೀಸಂನ ಪಾತ್ರಗಳು, ಭಯ ಹುಟ್ಟಿಸುವ ವಿಲನ್ಸ್‌ ಲುಕ್‌ಗಳು, ಆಗೋಚರ ಶಕ್ತಿಯ ಛಾಯೆ, ಅರ್ಜುನ್ ಜನ್ಯಾ (Arjun Janya) ಸಂಗೀತ ಸಂಯೋಜನೆ. ಹಾಗೂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ  ಎ.ಹರ್ಷ ಹಾಗೂ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಸೇರಿದಂತೆ ಜಾಕಿ ಭಾವನಾ (Bhavana), ಸೌರವ್ ಲೋಕೇಶ್ (Sourav Lokesh), ನಟಿ ಶ್ರುತಿ  (Shruti) ಅವರ ಪಾತ್ರದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಹರ್ಷ, ಶಿವಣ್ಣ, ಜಯಣ್ಣ ಮೂವರ ಕಾಂಬಿನೇಷನ್‌ನ ಈ ಚಿತ್ರಕ್ಕೆ ಸ್ವಾಮಿ ಅವರ ಅದ್ಭುತ ಕ್ಯಾಮೆರಾ ಕೈಚಳಕವಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment