ಪ್ರೀತಿಸಿದ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಸಜ್ಜಾದ 'ಆ ದಿನಗಳು' ನಟ!

Dec 25, 2019, 4:24 PM IST

 

2007 ರಲ್ಲಿ 'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ಮೂಡಿಸಿದ ನಟ ಚೇತನ್ ಕುಮಾರ್. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಸುವರ್ಣ ನ್ಯೂಸ್ ಜೊತೆ NRC,CAA ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಯನ್ನು ಶಾಸ್ತ್ರೋಕ್ತವಾಗಿ ಬರ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ವಿಶೇಷವೇನೆಂದರೆ ಚೇತನ್ ಕೈ ಹಿಡಿಯುತ್ತಿರುವ ಹುಡುಗಿಗೆ ಕನ್ನಡ ಬರುವುದಿಲ್ಲವಂತೆ! ಕನ್ನಡದ ಹುಡುಗನಿಗಾಗಿ ಕನ್ನಡವನ್ನು ಕಲಿಯುತ್ತಿದ್ದಾರಂತೆ!