Jan 25, 2023, 12:53 PM IST
ಸೌಂದರ್ಯ ತಮ್ಮ ಬ್ಯೂಟಿ ಹಾಗೂ ನಟನೆಯಿಂದ ಎಲ್ಲರ ಮನಸ್ಸು ಗೆದ್ದ ನಟಿ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜ್ಯೂ. ಸೌಂದರ್ಯ ಸದ್ದು ಮಾಡುತ್ತಿದ್ದಾರೆ. ಅವರೇ ರೀಲ್ಸ್ ಸ್ಟಾರ್ ಚೈತ್ರಾ. ಈ ಹುಡುಗಿ ನೋಡೋಕೆ ಸೌಂದರ್ಯ ತರಾನೆ ಕಾಣಿಸ್ತಾರೆ. ಸೌಂದರ್ಯ ಅವರ ಹಾಗೆ ಡ್ರೆಸ್ ಮಾಡಿಕೊಂಡು ಅದೇ ಗುಳಿಕೆನ್ನೆಯಲ್ಲಿ ಸ್ಮೈಲ್ ಮಾಡುತ್ತಾ ರೀಲ್ಸ್ ಮಾಡಿ ತನ್ನ ಪೇಜ್'ನಲ್ಲಿ ಶೇರ್ ಮಾಡ್ತಾರೆ. ಈ ಜ್ಯೂನಿಯರ್ ಸೌಂದರ್ಯ ಮಾಡೋ ರೀಲ್ಸ್'ಗೆ ಸಾವಿರ ಸಾವಿರ ಲೈಕ್ಸ್ ಸಿಗ್ತಿದೆ. ಇವಳ ಡಾನ್ಸ್, ಬ್ಯೂಟಿ ನೋಡಿ ಸೌಂದರ್ಯ ಮತ್ತೆ ಹುಟ್ಟಿ ಬಂದ್ರಾ ಅಂತ ಕಮೆಂಟ್ ಮಾಡ್ತಾರೆ ಈಕೆಯ ಫಾಲೋವರ್ಸ್.