ದಿನಚರಿಗಾಗಿ ಟೈಂ ಟೇಬಲ್ ಹಾಕಿದ್ದಾರೆ ರಾಕಿ ಭಾಯ್; ಈಗ ಹೇಗಿದೆ ಯಶ್ ಲೈಫ್?

Jun 28, 2023, 6:29 PM IST

ನ್ಯಾಷನಲ್ ಸ್ಟಾರ್ ಯಶ್ ಈಗ ಕ್ರೇಜ್ ಕಾ ಬಾಪ್. ಯಶ್ ಅಂದ್ರೆ ಹೆಣ್ಮಕ್ಳೂ ಗಂಡ್ ಹೈಕ್ಳು ಜೀವ ಬಿಡ್ತಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಯುವಕರ ಸ್ಟೈಲ್‌ ಐಕಾನ್‌ ಆಗಿದ್ದಾರೆ. ಈ ಸ್ಟೈಲ್ ಐಕಾನ್ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ.? ಅದನ್ನ ತಿಳಿದುಕೊಂಡ್ರೆ ಯಶ್ರನ್ನ ಫಾಲೋ ಮಾಡೋರು ವಾವ್ಹ್ ಅನ್ನದೇ ಇರೋಲ್ಲಾ.  ರಾಕಿ ರಿಚ್ಚೆಸ್ಟ್ ಸ್ಟಾರ್ ಅನ್ನೋದು ನಿಮ್ಮ ಕಣ್ಣಿಗೆ ಕಾಣುತ್ತೆ. ಹಾಗಂತ ಮನೆಯಲ್ಲಿ ಸುಮ್ಮನೆ ಕೂತ್ರೆ ಶ್ರೀಮಂತಿಕೆ ಉಳಿದುಕೊಳ್ಳುತ್ತಾ.? ಖಂಡಿತಾ ಇಲ್ಲ. ಯಶ್ ಕೂಡ ಸುಮ್ಮನೇ ಕೂತಿಲ್ಲ. ಕೆಜಿಎಫ್ ಮಾಡುವಾಗ ಇದ್ದ ಲೈಫ್ ಸ್ಟೈಲ್ ಅನ್ನ ಯಶ್ ಈಗ ಸಂಪೂರ್ಣ ಬದಲು ಮಾಡಿಕೊಂಡಿದ್ದಾರೆ. ತಮ್ಮ ದಿನಚರಿಗೆ ಟೈಮ್ ಟೇಬಲ್ ಫಿಕ್ಸ್ ಮಾಡಿಕೊಂಡಿದ್ದಾರೆ. ದಿನ ನಿತ್ಯ ಬೆಳಗ್ಗೆ 5 ಗಂಟೆಗೆ ಎದ್ದೇಳೋ ರಾಕಿ ಎರಡು ಗಂಟೆ ಜಿಮ್ನಲ್ಲಿ ಬೆವರು ಹರಿಸ್ತಾರಂತೆ. ಆ ನಂತರ ಸಿನಿಮಾ ಸ್ಟೋರಿ ಬೋರ್ಡ್ ವರ್ಕ್ ಶುರು ಮಾಡ್ತಾರಂತೆ. ಬೆಳಗಿನಿಂದ ಸಂಜೆ ವರೆಗೂ ಸಿನಿಮಾ ಡಿಸ್ಕಷನ್ನಲ್ಲಿ ಬ್ಯುಸಿ ಇರೋ ಯಶ್ ತಮ್ಮ ಕುಟುಂಬಕ್ಕೂ ಒಂದಿಷ್ಟು ಟೈಂ ಮೀಸಲಿಡ್ತಾರಂತೆ.