Oct 16, 2023, 10:31 AM IST
ಘೋಸ್ಟ್ ಅಂದ್ರೆ ದೆವ್ವ.. ದೆವ್ವ ಅಂದ್ರೆ ಯಾರಿಗೆ ಭಯ ಆಗೋಲ್ಲ ಹೇಳಿ. ಆ ದೆವ್ವಕ್ಕಿಂತು ಹೆಚ್ಚು ಭಯ ಹುಟ್ಟಿಸುತ್ತಿದೆ ಈ ಘೋಸ್ಟ್(Ghost). ತಮಿಳಿನ ಉಳಗನಾಯಗನ್ ಕಮಲ್ ಹಾಸನ್ ಹಾಗೂ ಬಿಟೌನ್ ಬಾಯ್ಜಾನ್ ಸಲ್ಮಾನ್ ಖಾನ್‌ಗೂ ಘೋಸ್ಟ್ ಭಯ ಶುರುವಾಗಿದೆ. ಬಿಗ್ ಡ್ಯಾಡಿ ಆಫ್ ಆಲ್ ಮಾಸ್ ಶಿವಣ್ಣ. ಈ ಮಾಸ್ ಮಹರಾಜಗೆ ಕ್ಲಾಸ್ ಸ್ಟಾರ್ಸ್ ಸಪೂರ್ಟ್ ಮಾಡ್ತಿದ್ದಾರೆ. ಘೋಸ್ಟ್ ಸಿನಿಮಾ ಪಂಚ ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಮುಂಬೈನಲ್ಲಿ ಸಲ್ಲು, ಚೆನ್ನೈನಲ್ಲಿ ಕಮಲ್ ಹಾಸನ್, ರಜನಿಕಾಂತ್, ಹೈದರಾಬಾದ್‌ನಲ್ಲಿ ಬಾಲಯ್ಯ ಸೇರಿದಂತೆ ನಟ ಧನುಷ್, ಮಲೆಯಾಳಂ ನಟ ಪೃತ್ವಿರಾಜ್ ಸುಕುಮಾರ್, ರಾಜಮೌಳಿ, ಘೋಸ್ಟ್ ಸಕ್ಸಸ್‌ಗೆ ಶುಭ ಹಾರೈಸಿದ್ದಾರೆ. ಘೋಸ್ಟ್ ಪ್ರಮೋಷನ್‌ನಲ್ಲಿ ಸೆಂಚುರಿ ಸ್ಟಾರ್ ಗ್ಯಾಂಗ್ ಫುಲ್ ಬ್ಯುಸಿ. ಮುಂಬೈ, ಕೊಚ್ಚಿ, ಚನ್ನೈ, ಹೈದರಾಬಾದ್ ಅಂತ ಸುತ್ತುತ್ತಿದ್ದಾರೆ. ಅಷ್ಟೆ ಅಲ್ಲ ಮುಂಬೈನಲ್ಲಿರೋ ಏಷ್ಯಾದ ಅತಿ ದೊಡ್ಡ ಹೋಲ್ಡಿಂಗ್ಸ್ನಲ್ಲಿ ಶಿವಣ್ಣನ(Shivaraj kumar) ಕಟೌಟ್ ಹಾಕಲಾಗಿದೆ. ನಾಳೆಯಿಂದ ಘೋಸ್ಟ್ ಟಿಕೆಟ್ (Ticket) ಬುಕ್ಕಿಂಗ್ ಶುರುವಾಗ್ತಿದೆ.
ಇದನ್ನೂ ವೀಕ್ಷಿಸಿ: Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಯಾವ ರಾಶಿಯವರು ಏನು ಮಾಡಬೇಕು ?