Apr 24, 2023, 1:36 PM IST
ವರನಟ ಡಾ. ರಾಜ್ಕುಮಾರ್ ಅವರ ಜನ್ಮದಿನವನ್ನು ಇಂದು (ಏಪ್ರಿಲ್ 24) ಆಚರಿಸಲಾಗುತ್ತಿದೆ. ಅಣ್ಣಾವ್ರ ಹುಟ್ಟುಹಬ್ಬವನ್ನು ಕರ್ನಾಟಕ ಮಾತ್ರವಲ್ಲದೇ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶೇಷ ಎಂದರೆ ದೂರದ ಜಪಾನ್ನಲ್ಲೂ ರಾಜ್ಕುಮಾರ್ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಅಲ್ಲಿರುವ ರಾಜ್ ಅಭಿಮಾನಿಗಳು ಅಣ್ಣಾವ್ರ ಫೋಟೋದ ಎದುರು ಕೇಕ್ ಕತ್ತರಿ ಸಂಭ್ರಮಿಸಿದ್ದಾರೆ. ಡಾ.ರಾಜ್ ನಿಧನ ಹೊಂದಿ ಅನೇಕ ವರ್ಷಗಳಾದರೂ ಅವರ ನೆನಪು ಮಾತ್ರ ಜೀವಂತ. ಅದ್ಭುತ ಸಿನಿಮಾಗಳ ಮೂಲಕ ಇಂದಿನ ಪೀಳಿಗೆಯ ಅಭಿಮಾನಿಗಳನ್ನೂ ರಂಜಿಸುತ್ತಿದ್ದಾರೆ.