ಅಪ್ಪಟ ಅಭಿಮಾನಿ ಆಸೆ ಈಡೇರಿಸಿದ ವಿಜಯ್...ಫ್ಯಾನ್ ಆಟೋ ಮೇಲೆ ಭೀಮನ ಆಟೋಗ್ರಾಫ್!

Jun 28, 2023, 11:30 AM IST

 ಸ್ಯಾಂಡಲ್‌ವುಡ್‌ ಭೀಮ ದುನಿಯಾ ವಿಜಯ್ ಅಪ್ಪಟ ಅಭಿಮಾನಿಗಳನ್ನ ಹೆಚ್ಚು ಆರಾಧಿಸುತ್ತಾರೆ. ತನ್ನ ಡೈ ಹಾರ್ಡ್ ಫ್ಯಾನ್ಸ್ ಎಲ್ಲಾ ತ್ಯಾಗಗ್ಗು ಸಿದ್ಧ ಅಂತ ವಿಜಯ್ ಹಿಂದೊಮ್ಮೆ ಹೇಳಿದ್ರು. ಅದರಲ್ಲೂ ಕಳೆದ ವರ್ಷ ರಿಲೀಸ್ ಆದ ಸಲಗ ಸಿನಿಮಾ ಯಶಸ್ಸು ಕಂಡು ವಿಜಯ್ ಫ್ಯಾನ್ಸ್ ಗ್ರೂಪ್ ದೊಡ್ಡದಾಗಿತ್ತು. ಈಗ ‘ಭೀಮ’ನ ಕೆಲಸದಲ್ಲಿ ಬ್ಯುಸಿಯಾಗಿರೋ ವಿಜಯ್ ತನ್ನ ಅಪ್ಪಟ ಅಭಿಮಾನಿಯೊಬ್ಬರ ಆಸೆ ಈಡೇರಿಸಿದ್ದಾರೆ. ತನ್ನ ಆಟೋ ಹಿಂಭಾಗದಲ್ಲಿ ವಿಜಯ್‌ ಫೊಟೋ ಹಾಕಿದ್ದ ಅಭಿಮಾನಿಗೆ ಧನ್ಯಾವಾದ ಹೇಳಿರುವ ವಿಜಯ್ ಆ ಫೋಟೋ ಕೆಳಗೆ ತನ್ನ ಆಟೋಗ್ರಾಫ್ ಹಾಕಿದ್ದಾರೆ. ಈ ವೀಡಿಯೋ ಈಗ ವಿಜಯ್ ಅಭಿಮಾನಿ ಬಳಗದಲ್ಲಿ ವೈರಲ್‌ ಆಗಿದೆ.