Bairagee: ಶಿವಣ್ಣ ಜತೆ ನಟನೆ: ಡಾಲಿ ಧನಂಜಯ್ ಅನುಭವ ಹೀಗಿತ್ತು!

Jun 19, 2022, 3:03 PM IST

'ಟಗರು' ಚಿತ್ರದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಹಾಗೂ ಡಾಲಿ ಧನಂಜಯ್‌ ಕಾಂಬಿನೇಶನ್‌ನಲ್ಲಿ 'ಬೈರಾಗಿ' ಸಿನಿಮಾ ಮೂಡಿ ಬರುತ್ತಿದ್ದು ಜು.1ಕ್ಕೆ ಸಿನಿಮಾ ತೆರೆ ಕಾಣಲಿದೆ. ಚಿತ್ರದಲ್ಲಿ ಶಿವಣ್ಣ ಎದುರಿಗೆ ಅಭಿನಯಿಸಿರುವ ಧನಂಜಯ್‌ ಸಿನಿಮಾ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಶಿವಣ್ಣನ ಜೊತೆ ಶೂಟಿಂಗ್ ಮಾಡುವುದು ಒಂದು ಒಳ್ಳೆಯ ಅನುಭವ. ಸೆಟ್‌ನಲ್ಲಿ ಯಾವಾಗಲೂ ತಮಾಷೆ, ನಗು ಇರುತ್ತದೆ. ಅಲ್ಲದೇ ಸಮಯ ಹೋಗುವುದೇ ಗೊತ್ತಾಗಲ್ಲ ಅದೊಂದು ಅದ್ಭುತ ಅನುಭವ. ಅದರ ಮಧ್ಯೆ ಜೀವನದ ಫಿಲಾಸಫಿಗಳನ್ನು ಶಿವಣ್ಣ ಹೇಳುತ್ತಾರೆ ಎಂದು ಧನಂಜಯ್‌ ತಿಳಿಸಿದ್ದಾರೆ. ವಿಜಯ್‌ ಮಿಲ್ಟನ್‌ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್‌ ಬಂಡವಾಳ ಹೂಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies